ಕಾವೇರಿ ವಿಚಾರದಲ್ಲಿಎರಡು ರಾಜ್ಯಗಳು ಚರ್ಚೆ ಮಾಡಿ ವಿವಾದ ಬಗೆಹರಿಸಬೇಕು – ನಟ ಶಿವರಾಜ್ ಕುಮಾರ್ ಸಲಹೆ.

ಬೆಂಗಳೂರು,ಸೆಪ್ಟಂಬರ್,29,2023(www.justkannada.in): ಕಾವೇರಿ   ನದಿ ನೀರು ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಚರ್ಚೆ ಮಾಡಿ ವಿವಾದ ಬಗೆಹರಿಸಲು ಮುಂದಾಗಬೇಕು ಎಂದು ಸ್ಯಾಂಡಲ್ ವುಡ್  ನಟ ಶಿವರಾಜ್ ಕುಮಾರ್ ಸಲಹೆ ನೀಡಿದರು.

ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಫಿಲ್ಮ ಚೇಂಬರ್ ಬಳಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶಿವರಾಜ್ ಕುಮಾರ್​ ಕಾವೇರಿ ನೀರಿಗಾಗಿ ಮೊದಲಿನಿಂದ ಹೋರಾಡುತ್ತಿದ್ದೇವೆ. ಕಾವೇರಿ ತಾಯಿ ಪವರ್ ಅಂಥದ್ದೇ, ಕಾವೇರಿ ತಾಯಿ ಎಲ್ಲರಿಗೂ ಅಗತ್ಯ. ಕಲಾವಿದರು ಬರಲ್ಲ ಅಂತೀರಾ, ಕಲಾವಿದರು ಬಂದು ಏನ್ ಮಾಡಬೇಕು ನೀವೇ ಹೇಳಿ.  ನಾವು ಹೋರಾಟದಲ್ಲಿ ಭಾಗಿಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದರೇ ಸಮಸ್ಯೆ ಬಗೆಹರಿಯುತ್ತಾ? ಕರ್ನಾಟಕ ರೈತರು ಬೇರೆ ಅಲ್ಲ. ತಮಿಳುನಾಡಿನ ರೈತರು ಬೇರೆ ಅಲ್ಲ. ಎಲ್ಲಾ ರೈತರು ಒಂದೆ. ಹೋರಾಟದಿಂದಲೇ ಎಲ್ಲವೂ ಸರಿ ಹೋಗಲ್ಲ.  ಕರ್ನಾಟಕದ ಜನರಿಗೆ ಗೌರವವಿದೆ ಉಳಿಸಿಕೊಳ್ಳೋಣ  ಎಂದರು.

ಎಲ್ಲ ನಾಯಕರು ಕುಳಿತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು. ಎಲ್ಲರೂ ರೈತರೇ, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಸ್​ನ ಹೊಡೆದು ಹಾಕಿದರೇ ಹೋರಾಟ ಆಗುತ್ತಾ? ಎಂದು ನಟ ಶಿವರಾಜ್​ ಕುಮಾರ್​ ಪ್ರಶ್ನಿಸಿದರು

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ನೀರಿನ ಸಮಸ್ಯೆ 10ನೇ ಶತಮಾನದಿಂದಲೂ ಇದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಕ್ರಿಪ್ಟ್ ಕೊಡಿ. ಕಾವೇರಿ ವಿಚಾರವಾಗಿ ಒಂದು ಚಿತ್ರ ಮಾಡಿ. ಸಂಸತ್ ಇದೆ, ನಾಡಿನ ಸಂಪತ್ ಇದೆ. ಇದರ ಮೇಲೆ ಜಲ ಇದೆ. ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಪರಿಹಾರ ಸಾಧ್ಯ ಎಂದರು.

Key words: Karnataka – Tamil Nadu-governments – Cauvery issue – Actor- Shivaraj Kumar