ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಸಾಥ್: ನಟ ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ: ನಟನಟಿಯರು ಭಾಗಿ.

ಬೆಂಗಳೂರು,ಸೆಪ್ಟಂಬರ್,29,2023(www.justkannada.in):  ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ಕರ್ನಾಟಕ ಬಂದ್ ಆಗಿದ್ದು ಇದೀಗ ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಸಾಥ್ ನೀಡಿದೆ.

ಫಿಲ್ಮ ಚೇಂಬರ್ ಬಳಿ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ಕಲಾವಿದರು ಧರಣಿ ನಡೆಸುತ್ತಿದ್ದು  ಕನ್ನಡ ಚಿತ್ರರಂಗದ ಹಿರಿಯ ಕಿರಿಯ ನಟ ನಟಿಯರು  ಪಾಲ್ಗೊಂಡು ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ನಟರಾದ ಚಾಲೇಂಜಿಂಗ್ ಸ್ಟಾರ್ ದರ್ಶನ್, ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀಮುರುಳಿ, ವಶಿಷ್ಟಸಿಂಹ, ದುನಿಯಾ ವಿಜಯ್, ಹಿರಿಯ ನಟ ರಂಗಾಯಣ ರಘು ಶ್ರೀನಾಥ್, ಹಿರಿಯ ನಟಿಯರಾದ ಉಮಾಶ್ರೀ, ಪದ್ಮಾ ವಸಂತಿ, ನಟಿ ಪೂಜಾಗಾಂಧಿ, ಅನು ಪ್ರಭಾಕರ್ ಸೇರಿ ಹಲವು ನಟ ನಟಿಯರು ಭಾಗಿಯಾಗಿದ್ದಾರೆ.

-V.Mahesh kumar

Key words: Sandalwood – Cauvery fight- Protest – actor -Shivanna-Actresses- participate.