Thursday, August 13, 2026

BDA Apartments

Home Front Page ಸತತ ಎರಡನೇ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಟ್ಟ ಕರ್ನಾಟಕ

ಸತತ ಎರಡನೇ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಟ್ಟ ಕರ್ನಾಟಕ

ಬೆಂಗಳೂರು, ಡಿಸೆಂಬರ್ 02, 2019 (www.justkannada.in): ಸತತ ಎರಡನೇ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಗೆ ಕರ್ನಾಟಕ ತಂಡ ಮುತ್ತಿಕ್ಕಿದೆ.

ಲಾಲ್‌ಭಾಯಿ ಕಾಂಟ್ರ್ಯಾಕ್ಟರ್‌ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ರೋಚಕ ಫೈನಲ್‌ನಲ್ಲಿ ಕರ್ನಾಟಕ ತಂಡವು ಒಂದು ರನ್‌ನಿಂದ ತಮಿಳುನಾಡು ತಂಡಕ್ಕೆ ಸೋಲಿನ ಕಹಿ ಉಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಒಡ್ಡಿದ್ದ 180 ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ತಮಿಳುನಾಡು ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. ಆದರೆ ನಾಟಕೀಯ ತಿರುವುಗಳನ್ನು ಕಂಡ ಕೊನೆಯ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್ ಮೇಲುಗೈ ಸಾಧಿಸಿದರು.

ಈ ಮೂಲಕ ಗೆದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಎರಡನೇ ಬಾರಿಗೆ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಕರ್ನಾಟಕದ್ದಾಯಿತು.