Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸೌರವ್‌ ಗಂಗೂಲಿಗಾಗಿ ಬಿಸಿಸಿಐ ಸಂವಿಧಾನವೇ ಬದಲು !

ಸೌರವ್‌ ಗಂಗೂಲಿಗಾಗಿ ಬಿಸಿಸಿಐ ಸಂವಿಧಾನವೇ ಬದಲು !

ಮುಂಬಯಿ, ಡಿಸೆಂಬರ್ 02, 2019 (www.justkannada.in): ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗಾಗಿ ತನ್ನ ಸಂವಿಧಾನವನ್ನೇ ಬದಲಿಸಲು ಬಿಸಿಸಿಐ ಮುಂದಾಗಿದೆ.

ಮುಂಬಯಿಯಲ್ಲಿ ನಡೆದ 88ನೇ ಸರ್ವ ಸದಸ್ಯರ ಸಭೆಯಲ್ಲಿ ಸಂವಿಧಾನ ತಿದ್ದುಪಡಿ ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ ಆಡಳಿತ ಮಂಡಳಿ, 2024ರ ವರೆಗೆ ಗಂಗೂಲಿ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಅವಕಾಶ ಕಲ್ಪಿಸಿದೆ.

ಇದಷ್ಟೇ ಅಲ್ಲ, ಈ ತಿದ್ದುಪಡಿ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದು, ಕೋರ್ಟ್‌ ಒಪ್ಪಿದರೆ ಗಂಗೂಲಿ 2024ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸಭೆಯ ಬಳಿಕ ಮಾತನಾಡಿದ ಗಂಗೂಲಿ, ನಮ್ಮ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಇರಿಸುತ್ತೇವೆ, ಕೋರ್ಟ್‌ ತೀರ್ಮಾನಕ್ಕಾಗಿ ಕಾಯುತ್ತೇವೆ ಎಂದಿದ್ದಾರೆ.