Thursday, August 13, 2026

BDA Apartments

Home Cinema 10 ಕೋಟಿ ಹೋಗಿ 100 ಕೋಟಿ ರೂ. ಆಯ್ತು: ‘ಅವನೇ ಶ್ರೀಮನ್ನಾರಾಯಣ’ ಬಜೆಟ್ ಗುಟ್ಟು ಬಿಚ್ಚಿಟ್ಟ...

10 ಕೋಟಿ ಹೋಗಿ 100 ಕೋಟಿ ರೂ. ಆಯ್ತು: ‘ಅವನೇ ಶ್ರೀಮನ್ನಾರಾಯಣ’ ಬಜೆಟ್ ಗುಟ್ಟು ಬಿಚ್ಚಿಟ್ಟ ಪುಷ್ಕರ್ ಮಲ್ಲಿಕಾರ್ಜುನಯ್ಯ

ಬೆಂಗಳೂರು, ಡಿಸೆಂಬರ್ 02, 2019 (www.justkannada.in): ‘ಅವನೇ ಶ್ರೀಮನ್ನಾರಾಯಣ’ ಬಜೆಟ್ ಎಷ್ಟಾಗಿರಬಹುದು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.
ಈ ಬಗ್ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ. ಮೊದಲು ಸಿನಿಮಾವನ್ನು 10 ಕೋಟಿ ಒಳಗೆ ಮುಗಿಸಬೇಕು ಎನ್ನುವುದು ಅವರ ಪ್ಲಾನ್ ಆಗಿತಂತೆ. ಅದೀಗ ಹತ್ತು ಪಟ್ಟು ಹೆಚ್ಚಾಗಿದೆ.

ಸಿನಿಮಾದ ಬಜೆಟ್ ಅಂದುಕೊಂಡ ಮಟ್ಟಕ್ಕಿಂತ ಹತ್ತರಷ್ಟು ಹೆಚ್ಚಾಗಿದೆ. ಅಂದಾಜಿಗೆ ಲೆಕ್ಕ ಹಾಕಿದರೆ, ಸಿನಿಮಾದ ಬಜೆಟ್ 100 ಹತ್ತಿರ ಬರುತ್ತದೆ. ಇಷ್ಟೊಂದು ದೊಡ್ಡ ಬಂಡವಾಳ ಹಾಕಿ, ಈ ಪ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗಿದೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.