ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ, ಮೈಸೂರ್ ಏರ್ಪೋರ್ಟ್ ನಲ್ಲಿ ಹೇಳಿದ್ದೇನು ಗೊತ್ತ..?

 

ಮೈಸೂರು, ಮೇ 08, 2019 : (www.justkannada.in news ) ಕಳೆದ ಮೂರು ದಿನಗಳಿಂದ ಮೈಸೂರಿನಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ , ಈ ಅವಧಿಯಲ್ಲಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡದ್ದು ವಿಶೇಷ.

ಇಂದು ಹುಬ್ಬಳಿಗೆ ತೆರಳುವ ವೇಳೆಯಲ್ಲೂ ವಿಮಾನ ನಿಲ್ದಾಣದಲ್ಲಿ ಕಾದು ನಿಂತಿದ್ದ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಅವರು ಕಳೆದ ಮೂರು ದಿನದಿಂದ ಮೈಸೂರು ಭಾಗದಲ್ಲೆ ಉಳಿದುಕೊಂಡಿದ್ದರು. ಮಡಿಕೇರಿ ರೆಸಾರ್ಟ್‌ ನೆಲ ದಿನ ಹಾಗೂ ಕಾಟೂರಿನ ಫಾರ್ಮ್ ಹೌಸ್ ನಲ್ಲಿ ಕೆಲ ಕಾಲ ಸಮಯ ಕಳೆದಿದ್ದ ಸಿದ್ದರಾಮಯ್ಯ, ಇಂದು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.
ಈ ವೇಳೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಿದ್ದರಾಮಯ್ಯ ಅವರಿಗೆ ಕಾದು ಕುಳಿತಿದ್ದರು. ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮಾತಿಗೆಳೆಯಲು ಮುಂದಾದರು. ಆದರೆ ಯಾವುದೇ ಪ್ರತಿಕ್ರಿಯೆ ‘ ನೀಡದೆ ‘ ಇಲ್ಲಿ ಮಾತನಾಡಲು ಏನು‌ ಇಲ್ಲ. ‘ ಎಂದು ಉತ್ತರಿಸಿ ವಿಮಾನಯೇರಿದ್ದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತು.

ಅತೃಪ್ತರ ನಡೆಗೆ ಸಿದ್ದು ಬೇಸರ :

ಕಳೆದ ದಿನಗಳಿಂದ ಮಾಧ್ಯಮಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಿಎಂ ಬದಲಾವಣೆಯದ್ದೆ ಸುದ್ದಿಯಾಗುತ್ತಿದೆ. ಮಾತ್ರವಲ್ಲದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಈ ರೀತಿ ಒತ್ತಡ ಹೇರುತ್ತಿರುವವರು ಕಾಂಗ್ರೆಸ್ ಶಾಸಕರುಗಳೇ ಎನ್ನುವುದು ಮತ್ತಷ್ಟು ವಿಶೇಷ.
ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ‌ ಎಂದು ಒಪ್ಪಿಕೊಳ್ಳದ ಕಾಂಗ್ರೆಸ್ ಅತೃಪ್ತರು, ಇದೀಗ ‘ ಸಿದ್ದರಾಮಯ್ಯ ಸಿಎಂ ‘ ಅಸ್ತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್ ಅತೃಪ್ತರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ನಡೆಸಿದ ಯತ್ನ ಫಲ ನೀಡಿಲ್ಲ. ಬದಲಿಗೆ ಎಚ್ಡಿಕೆ ನಡೆಯಿಂದ ಕೈ ಅತೃಪ್ತರು ಮೈತ್ರಿಯಿಂದ ದೂರವೇ ಸರಿಯುತ್ತಿರುವುದು
ಕಗ್ಗಂಟಾಗಿದೆ.
ತಾವೇ ರಚಿಸಿದ ಮೈತ್ರಿ ಸರ್ಕಾರ ಈಗ ಗೊಂದಲದ ಗೂಡಾಗುತ್ತಿರುವುದು ಸಿದ್ದರಾಮಯ್ಯ ಅವರ ಬೇಸರಕ್ಕೂ ಎಡೆ ಮಾಡಿದೆ. ಈ ಕಾರಣಕ್ಕೆ ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ಮಾಧ್ಯಮಗಳಿಂದ ದೂರವಿದ್ದರು. ಈಗಲೂ ಅದೇ ಅಂತರ ಕಾಯ್ದುಕೊಳ್ಳುತ್ತಿರುವುದು ಎನ್ನಲಾಗಿದೆ.

karnataka ex-chief minister siddramaiah maintains distance from media persons in mysore