ಕಾಂಗ್ರೆಸ್ ನ ಉಚಿತ ವಿದ್ಯುತ್ ಹೇಳಿಕೆ ಹಾಸ್ಯಸ್ಪದ: ಹಳೇ ಮೈಸೂರು ಭಾಗ ನಮ್ಮ ಟಾರ್ಗೆಟ್ ಎಂಬ ಬಿವೈ ವಿಜಯೇಂದ್ರ.

ಮೈಸೂರು,ಜನವರಿ,18,2023(www.justkannada.in): 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಕಾಂಗ್ರೆಸ್ ಘೋಷಣೆ ಹಾಸ್ಯಸ್ಪದ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ,  ನಮ್ಮ ಮುಂದಿರುವ ಗುರಿ ಕನಿಷ್ಟ 140 ಸ್ಥಾನ ಗೆಲ್ಲಬೇಕು. ಮುಂದೆ ಮತ್ತೆ  ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಂತೆ ಹಗಲುಗನಸು ಕಾಣುತ್ತಿದೆ.  ಉಚಿತ ವಿದ್ಯುತ್  ಹೇಳಿಕೆ ಹಾಸ್ಯಸ್ಪದ. ಬಿಜೆಪಿ ಮತ್ತೆ ಅಧಿಕಾರಕ್ಕೆ  ಬರುವಾಗ ಇಂತಹ ಹೇಳಿಕೆ ಹಾಸ್ಯಸ್ಪದ ಹಳೇ ಮೈಸೂರು ಭಾಗ ನಮ್ಮ ಟಾರ್ಗೆಟ್ ಆಗಿದೆ ಎಂದರು.

ಬಿಕೆ ಹರಿ ಪ್ರಸಾದ್ ಹೇಳಿಕೆ ಶೋಭೆ ತರಲ್ಲ ಈ ರೀತಿ ಹೇಳಿಕೆ ಅವರ ಮನಸ್ಥಿತಿ ತೋರುತ್ತದೆ.  ಅವರ ಮಾತು ಅವರ ಮಾನಸಿಕ ಸ್ಥಿತಿ ತೋರುತ್ತದೆ. ಕ್ಷಮೆ ಕೇಳೋದು ದೊಡ್ಡ ವಿಷಯವಲ್ಲ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.

ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ನಾನು ಎಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವುದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಫೈನಲ್ ಆಗಿಲ್ಲ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೂ ರಾಜಕೀಯ ಶಕ್ತಿ ಕೊಟ್ಟಿರುವುದು ವರುಣಾ ಜನರು.
ಎಲ್ಲೇ ಸ್ಪರ್ಧೆ ಮಾಡಿದರೂ ಈ ಜನರಿಗೆ ಋಣಿಯಾಗಿರುತ್ತೇನೆ ಎಂದರು.

Key words: Congress-free electricity -statement – ridiculous-BY Vijayendra.