ಈ ಬಾರಿಯೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ

ಬೆಂಗಳೂರು, ಫೆಬ್ರವರಿ 26, 2023 (www.justkannada.in): ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಂಕ ಸಿಗಲಿದೆ.

ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕವನ್ನು ನೀಡಲಾಗುತ್ತದೆ.

ಈ ಕೃಪಾಂಕವನ್ನು ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಚೇತರಿಕೆಯನ್ನು ಕಂಡಿರದ ಕಾರಣ ನೀಡಲಾಗುತ್ತಿದೆ.

ಕೃಪಾಂಕದ ಅನುಸಾರ ಎಸ್ ಎಸ್ ಎಲ್ ಸಿಯ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿ, ಉಳಿದ 3 ವಿಷಯಗಳಲ್ಲಿ ಗರಿಷ್ಠ 26 ಅಂಕಗಳು ದೊರೆಯಲಿವೆ.

ಪಿಯುಸಿಯಲ್ಲಿ ಕನಿಷ್ಠ 210 ಅಂಕ ಪಡೆದವರಿಗೆ 2 ವಿಷಯಗಳಲ್ಲಿ ಶೇ.5ರಂತೆ ಅಂದರೇ ತಲಾ 5 ಅಂಕಗಳು ಸೇರಿ ಗರಿಷ್ಠ 10 ಅಂಕ ಪಡೆಯಬಹುದಾಗಿದೆ.