ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಸಂಗ್ರಹ ಶುರು: ಇಲ್ಲಿದೆ ದರ ಪಟ್ಟಿ….

ಬೆಂಗಳೂರು, ಫೆಬ್ರವರಿ 26, 2023 (www.justkannada.in): ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಸಂಗ್ರಹ ಆರಂಭವಾಗಿದೆ.

ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಆರಂಭಿಸಲಾಗಿದೆ.

ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಸರ್ವೀಸ್ ರಸ್ತೆ ಹೊರತು ಪಡಿಸಿ, ಉಳಿದ ಆರು‌ಪಥಗಳಿಗೆ ಶುಲ್ಕ ಅನ್ವಯವಾಗಲಿದೆ.

ಟೋಲ್ ದರ ಹೀಗಿರಲಿದೆ.

ಕಾರು, ಜೀಪು, ವ್ಯಾನುಗಳಿಗೆ

ಏಕಮುಖ ಸಂಚಾರಕ್ಕೆ 135ರೂ.

ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70ರೂ,  ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 4525ರೂ.

ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್.

ಏಕಮುಖ ಸಂಚಾರಕ್ಕೆ 220ರೂ.

ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 7315ರೂ.

ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್)

ಏಕಮುಖ ಸಂಚಾರಕ್ಕೆ 460ರೂ.

ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230ರೂ,  ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 15325ರೂ.

ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್)

ಏಕಮುಖ ಸಂಚಾರಕ್ಕೆ 500ರೂ.

ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ,  ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 16715ರೂ.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ(6ರಿಂದ 8 ಆಕ್ಸೆಲ್)

ಏಕಮುಖ ಸಂಚಾರಕ್ಕೆ 720ರೂ.

ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ,  ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 24030ರೂ.

ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)

ಏಕಮುಖ ಸಂಚಾರಕ್ಕೆ 880ರೂ.

ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440ರೂ,  ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 29255ರೂ.