Sunday, September 20, 2026

BDA Apartments

ಫೆಬ್ರವರಿ 25ರಂದು ಥಿಯೇಟರ್’ಗಳಿಗೆ ಶ್ರೀನಿ ‘ಓಲ್ಡ್ ಮಾಂಕ್’ BDA JK_Adv BDA Adv
Home Cinema ಫೆಬ್ರವರಿ 25ರಂದು ಥಿಯೇಟರ್’ಗಳಿಗೆ ಶ್ರೀನಿ ‘ಓಲ್ಡ್ ಮಾಂಕ್’

ಫೆಬ್ರವರಿ 25ರಂದು ಥಿಯೇಟರ್’ಗಳಿಗೆ ಶ್ರೀನಿ ‘ಓಲ್ಡ್ ಮಾಂಕ್’

ಬೆಂಗಳೂರು, ಫೆಬ್ರವರಿ 02, 2022 (www.justkannada.in): ಶ್ರೀನಿ ನಾಯಕರಾಗಿ ನಟಿಸಿ ನಿರ್ದೇಶಿಸಿರುವ ಓಲ್ಡ್ ಮಾಂಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಈ ಹಿಂದೆ ಓಲ್ಡ್ ಮಾಂಕ್ ಸಿನಿಮಾ ಫೆ.11ರಂದು ಬಿಡುಗಡೆಯಾಗುವುದಾಗಿ ಹೇಳಲಾಗಿತ್ತು. ಇದೀಗ ಆ ದಿನಾಂಕ ಬದಲಾಗಿದ್ದು, ಫೆ.25ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಇನ್ನುಮುಂದೆ ಬಿಡುಗಡೆ ದಿನಾಂಕವನ್ನು ಮುಂದೂಡುವುದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಏನೇ ಆದರೂ ಫೆ.25ರಂದು ಪ್ರೇಕ್ಷಕರ ಮುಂದೆ ಓಲ್ಡ್ ಮಾಂಕ್ ಬರಲಿದೆ ನಟ ಶ್ರೀನಿ ಹೇಳಿದ್ದಾರೆ.

ಕೆ.ಪಿ ಶ್ರೀಕಾಂತ್ ನಿರ್ಮಾಪಕರಾಗಿದ್ದು, ಶ್ರೀನಿವಾಸ್ ಓಲ್ಡ್ ಮಾಂಕ್ ನಾಯಕರಾಗಿ ನಟಿಸಿ ನಿರ್ದೇಶನ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.  ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.