Thursday, August 13, 2026

BDA Apartments

Home Front Page ಸಿಎಂ ಬಿಎಸ್ ವೈ ಭೇಟಿಯಾಗಲಿರುವ ಕಂಬಳದ ಉಸೇನ್ ಬೋಲ್ಟ್  ‘ಶ್ರೀನಿವಾಸ್ ಗೌಡ’…

ಸಿಎಂ ಬಿಎಸ್ ವೈ ಭೇಟಿಯಾಗಲಿರುವ ಕಂಬಳದ ಉಸೇನ್ ಬೋಲ್ಟ್  ‘ಶ್ರೀನಿವಾಸ್ ಗೌಡ’…

ಬೆಂಗಳೂರು,ಫೆ,17,2020(www.justkannada.in): ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಶ್ರೀನಿವಾಸ್​ ಗೌಡ ವಿಶ್ವದ ಅತ್ಯಂತ ವೇಗದ ಓಟಗಾರ ಎನಿಸಿಕೊಂಡಿರುವ ಉಸಾನ್​ ಬೋಲ್ಟ್​ರನ್ನೂ ಹಿಂದಿಕ್ಕಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ನಡುವೆ ಶ್ರೀನಿವಾಸ್ ಗೌಡ ಅವರು ವಿಧಾನಸೌಧದಲ್ಲಿ  ಇಂದು  ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿಯಾಗಲಿದ್ದಾರೆ.

ಶ್ರೀನಿವಾಸ ಗೌಡ ಅವರು ಇಂದು ಮಧ್ಯಾಹ್ನ 3-15 ಗಂಟೆಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಶ್ರೀನಿವಾಸ ಗೌಡ ಅವರಿಗೆ ಕ್ರೀಡಾ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕಂಬಳ ಕೆರೆಯಲ್ಲಿ 100 ಮೀ. ದೂರವನ್ನು ಕೇವಲ 9.55 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಉಸೇನ್‌ ಬೋಲ್ಟ್‌ ದಾಖಲೆಯನ್ನೇ  ಮೂಡುಬಿದಿರೆಯ ಶ್ರೀನಿವಾಸ ಗೌಡ ಮುರಿದಿದ್ದಾರೆ. ಶ್ರೀನಿವಾಸ ಗೌಡ ಅವರು ಈಗಾಗಲೇ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರ ಗಮನ ಸೆಳೆದಿದ್ದಾರೆ. ಶ್ರೀನಿವಾಸ್ ಗೌಡ ಅವರನ್ನು ಒಲಿಂಪಿಕ್ಸ್​ಗೆ ಕಳಿಸುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Key words: kambala-Srinivas Gowda – meet- CM BS yeddyurappa