Tuesday, September 22, 2026

BDA Apartments

ನಾರಾಯಣಗೌಡ ಒಬ್ಬ ಕಳ್ಳ: ಬಿಎಸ್ ವೈಗೂ ಬಾಂಬೆ ಟೋಪಿ ಹಾಕ್ತಾನೆ- ಜೆಡಿಎಸ್ ಮುಖಂಡ ...
Home Front Page ನಾರಾಯಣಗೌಡ ಒಬ್ಬ ಕಳ್ಳ: ಬಿಎಸ್ ವೈಗೂ ಬಾಂಬೆ ಟೋಪಿ ಹಾಕ್ತಾನೆ- ಜೆಡಿಎಸ್ ಮುಖಂಡ ಕಿಡಿ…

ನಾರಾಯಣಗೌಡ ಒಬ್ಬ ಕಳ್ಳ: ಬಿಎಸ್ ವೈಗೂ ಬಾಂಬೆ ಟೋಪಿ ಹಾಕ್ತಾನೆ- ಜೆಡಿಎಸ್ ಮುಖಂಡ ಕಿಡಿ…

ಮಂಡ್ಯ,ಸೆ,16,2019(www.justkannada.in):  ಅನರ್ಹ ಶಾಸಕ ನಾರಾಯಣಗೌಡ ಒಬ್ಬ ಕಳ್ಳ. ಎಲ್ಲರಿಗೂ ಬಾಂಬೆ ಟೋಪಿ ಹಾಕ್ತಾನೆ ಎಂದು ಕೆ.ಆರ್ ಪೇಟೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೃಷ್ಣೇಗೌಡ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ಮುಖಂಡ ಕೃಷ್ಣೇಗೌಡ, ಹೆಚ್.ಡಿ ದೇವೇಗೌಡರ ವಿರುದ್ದ ಮಾತನಾಡಿದರೇ ಬೇರೆ ಪಕ್ಷದವರು ಗುರುತಿಸುತ್ತಾರೆ. ಹೀಗಾಗಿ ನಾರಾಯಣಗೌಡ ಹೆಚ್.ಡಿ ದೇವೇಗೌಡರ ವಿರುದ್ದ ಮಾತನಾಡಿದ್ದಾರೆ. ನಾರಾಯಣಗೌಡ ಎಲ್ಲರಿಗೂ ಬಾಂಬೆ ಟೋಪಿ ಹಾಕ್ತಾನೆ. ಈಗ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಹೋಗಿದ್ದಾನೆ. ಅವರಿಗೂ ಬಾಂಬೆ ಟೋಪಿ ಹಾಕ್ತಾನೆ. ಸಿಎಂ ಬಿಎಸ್ ವೈ ಹುಷಾರಾಗಿರಬೇಕು ಎಂದು ಎಚ್ಚರಿಸಿದರು.

ಹಾಗೆಯೇ ನಾರಾಯಣಗೌಡರಿಗೆ ಒಂದು ಸವಾಲು ಹಾಕುತ್ತೇನೆ. ಕೆ.ಆರ್ ಪೇಟೆಯಲ್ಲಿ ನಾನು ಸ್ಪರ್ಧಿಸುತ್ತೇ. ನಾರಾಯಣಗೌಡ ಸ್ಪರ್ಧಿಸಲಿ ನೋಡೋಣ ಎಂದು ಸವಾಲು ಹಾಕಿದರು.

Key words: K.R pete-Narayana Gowda – thief-Bombay caps –  JDS leader -sparked