Sunday, August 23, 2026

BDA Apartments

Home Front Page ಕೆಲಸದಲ್ಲಿ ಪ್ರಾಕ್ಟಿಕಲ್ ಆಗಿ ಇರಿ -ಅಧಿಕಾರಿಗಳಿಗೆ ಮಾಜಿ ಸಚಿವ ಜಿ.ಟಿ ದೇವಗೌಡ ಸಲಹೆ

ಕೆಲಸದಲ್ಲಿ ಪ್ರಾಕ್ಟಿಕಲ್ ಆಗಿ ಇರಿ -ಅಧಿಕಾರಿಗಳಿಗೆ ಮಾಜಿ ಸಚಿವ ಜಿ.ಟಿ ದೇವಗೌಡ ಸಲಹೆ

ಮೈಸೂರು,ಸೆ,16,2019(www.justkannada.in): ಕೆಲಸದಲ್ಲಿ ಪ್ರಾಕ್ಟಿಕಲ್ ಆಗಿ ಇರ.  ಆಗಿರುವ ಕೆಲಸದ ಬಗ್ಗೆ ಸತ್ಯ ಒಪ್ಪಿಕೊಳ್ಳಿ ಎಂದು ಅಧಿಕಾರಿಗಳಿಗೆ ಮಾಜಿ ಸಚಿವ ಜಿ.ಟಿ ದೇವಗೌಡ ಸಲಹೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಸಂಭಂದಿಸಿದಂತೆ ಮಾಜಿ ಸಚಿವ ಜಿ.ಟಿ ದೇವೇಗೌಡ ಅಧಿಕಾರಿಗಳ ಜತೆ ಶಾಸಕರ ಕಚೇರಿ ಜಲದರ್ಶಿನಿಯಲ್ಲಿ  ಸಭೆ ನಡೆಸಿ ಚರ್ಚಿಸಿದರು.  ಸಭೆಯಲ್ಲಿ ಮಹಾನಗರ ಪಾಲಿಕೆ ಮತ್ತು ಮೂಡ ಅಧಿಕಾರಿಗಳು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಅಧಿಕಾರಿಗಳು ಕೆಲಸದಲ್ಲಿ ಪ್ರಾಕ್ಟಿಕಲ್ ಆಗಿ ಇರಬೇಕು. ಆಗಿರುವ ಕೆಲಸದ ಬಗ್ಗೆ ಸತ್ಯ ಒಪ್ಪಿಕೊಳ್ಳಿ ಎಂದು ಗುಡುಗಿದರು. ದಸರಾ ಹಿನ್ನೆಲೆ ರಿಂಗ್ ರಸ್ತೆಯ ಕಾಮಗಾರಿ ಬಗ್ಗೆ ದೂರವಾಣಿ ಮೂಲಕ ಮೂಡ ಅಧಿಕಾರಿ‌ ಕಾಂತರಾಜು ಬಳಿ ಮಾಹಿತಿ ಪಡೆದ ಶಾಸಕ ಜಿ.ಟಿ ದೇವೇಗೌಡ, ದಸರಾ ಹಿನ್ನಲೆ ಆದಷ್ಟು ಬೇಗ ರಿಂಗ್ ರಸ್ತೆಯ ಗುಂಡಿ ಮುಚ್ಚುವಂತೆ ಮತ್ತು ಲೈಟ್‌ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು. ಕಸ, ಬೀದಿ ದೀಪ, ಸ್ವಚ್ಚತೆ ಕಡೆ ಹೆಚ್ಚು ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

Key words: mysore- Chamundeshwari constituency-meeting- former minister-GT devegowda