Saturday, October 17, 2026

Dasara Wishes

Happy Dasara
Home Cinema ಮೊನ್ನೆಯಷ್ಟೇ ಕನ್ನಡದಲ್ಲಿ ಕೋವಿಡ್ ಜಾಗೃತಿ ಸಂದೇಶ ಹೇಳಿದ್ದ ಜೂನಿಯರ್ ಎನ್ ಟಿಆರ್’ಗೂ ಕೊರೊನಾ ಪಾಸಿಟಿವ್

ಮೊನ್ನೆಯಷ್ಟೇ ಕನ್ನಡದಲ್ಲಿ ಕೋವಿಡ್ ಜಾಗೃತಿ ಸಂದೇಶ ಹೇಳಿದ್ದ ಜೂನಿಯರ್ ಎನ್ ಟಿಆರ್’ಗೂ ಕೊರೊನಾ ಪಾಸಿಟಿವ್

ಬೆಂಗಳೂರು, ಮೇ 11, 2021 (www.justkannada.in): ಮೊನ್ನೆಯಷ್ಟೇ ಕನ್ನಡದಲ್ಲಿ ಕೋವಿಡ್ ವಿರುದ್ಧ ಜಾಗೃತಿ ಸಂದೇಶ ಹೇಳಿದ್ದ ಜೂನಿಯನ್ ಎನ್ ಟಿಆರ್ ಅವರಿಗೂ ಕೊರೊನಾ ಸೋಂಕು ತಗುಲಿದೆ.

ಎರಡು ದಿನದ ಹಿಂದೆ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​(RRR) ಚಿತ್ರತಂಡದ ಮೂಲಕ ಕೋವಿಡ್ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದರು.

ಇಂದು ಬೆಳಗ್ಗೆ ನಾನು ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದೆ. ವರದಿಯಲ್ಲಿ ಪಾಸಿಟಿವ್​ ಕಾಣಿಸಿಕೊಂಡಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ ಜೂನಿಯನ್ ಎನ್ ಟಿಆರ್.

ವೈದ್ಯರ ಸಲಹೆ ಮೇರೆಗೆ ನನ್ನ ಕುಟುಂಬದ ಸದಸ್ಯರೊಂದಿಗೆ ಹೋಂ ಕ್ವಾರಂಟೈನ್ ಆಗಿರುವೆ ಎಂದು ಮಾಹಿತಿ ನೀಡಿದ್ದಾರೆ.