Friday, August 21, 2026

BDA Apartments

Home Front Page ಕೊರೊನಾಗೆ ಅಮ್ಮ-ಅಕ್ಕನನ್ನು ಕಳೆದುಕೊಂಡ ಮನದ ನೋವು ಬಿಚ್ಚಿಟ್ಟ ವೇದ ಕೃಷ್ಣಮೂರ್ತಿ

ಕೊರೊನಾಗೆ ಅಮ್ಮ-ಅಕ್ಕನನ್ನು ಕಳೆದುಕೊಂಡ ಮನದ ನೋವು ಬಿಚ್ಚಿಟ್ಟ ವೇದ ಕೃಷ್ಣಮೂರ್ತಿ

ಬೆಂಗಳೂರು, ಮೇ 11, 2021 (www.justkannada.in): 

ಕ್ರಿಕೆಟ್‌ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಂದೇಶಕ್ಕೆ ಮನಮಿಡಿಯುತ್ತಿದೆ.

ಮಹಾಮಾರಿ ಕೊರೊನಾದಿಂದಾಗಿ ಇತ್ತೀಚೆಗೆ ತನ್ನ ಪ್ರೀತಿಯ ಅಮ್ಮ ಹಾಗೂ ಅಕ್ಕನನ್ನು ಕಳೆದುಕೊಂಡ ವೇದ ಈ ಇಬ್ಬರನ್ನು ಕುರಿತು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

“ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ’ ಎಂದು ಬಹಳ ದುಃಖದಿಂದ ಬರೆದುಕೊಂಡಿದ್ದಾರೆ.

ನೀವಿಬ್ಬರೂ ಮನೆಯ ಅಡಿಪಾಯದಂತೆ ಇದ್ದಿರಿ. ನಮ್ಮ ಜತೆಗೆ ನೀವು ಇರುವುದಿಲ್ಲ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನನ್ನು ಬಹಳ ಧೈರ್ಯವಂತಳಾಗಿ ಬೆಳೆಸಿದಿರಿ. ಬದುಕಿನ ಪ್ರತಿಯೊಂದು ಸವಾಲನ್ನೂ ನಿಭಾಯಿಸಲು ಹೇಳಿಕೊಟ್ಟಿರಿ ಎಂದು ಧನ್ಯವಾದ ಹೇಳಿದ್ದಾರೆ ವೇದಾ.