ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಕೋರ್ಟ್ ಗೆ ಸಲ್ಲಿಕೆ.

ವಾರಣಾಸಿ,ಮೇ,19,2022(www.justkannada.in):  ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ವರದಿಯನ್ನ ವಾರಣಾಸಿ ಸೆಷನ್ಸ್ ಕೋರ್ಟ್‍ ಗೆ ಸಲ್ಲಿಕೆ ಮಾಡಲಾಗಿದೆ.

ಕೋರ್ಟ್ ಕಮಿಷನರ್ ವಿಶಾಲ್ ಸಿಂಗ್  ಅವರು  70 ಪುಟಗಳ ವರದಿಯನ್ನ ವಾರಣಾಸಿ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಲಯದ ಸೂಚನೆ ಹಿನ್ನೆಲೆ ಮೇ14ರಿಂದ  16ರವರೆಗೆ ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು.

ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೆ ಹಿಂದೂ ವಿಗ್ರಹ,  ಕಮಲ ಕೆತ್ತನೆ ಇರುವ ಶಿಲೆಗಳು,  ಮಸೀದಿ ಗೋಡೆ ಮೇಲೆ ಕಂಸಾಳೆ ಇರುವ ಚಿತ್ರ, ಎಲ್ಲಾ ಚಿತ್ರಗಳ ಮೇಲೆ ಕೇಸರಿ ಬಣ್ಣವಿರುವ ಬಗ್ಗೆ ಸಾಕ್ಷ್ಯ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

Key words: Jnanawasi -Mosque – Survey -Report – Court.