ಜಿಂದಾಲ್ ಗೆ ಭೂಮಿ ಪರಭಾರೆ: ಸಚಿವ ಸಂಪುಟ ಸಭೆಯಲ್ಲಿ ಅಚ್ಚರಿ ನಿರ್ಣಯ.

ಬೆಂಗಳೂರು,ಮೇ,27,2021(www.justkannada.in): ಜಿಂದಾಲ್ ಕಂಪನಿಗೆ  ಭೂಮಿ ಪರಭಾರೆ ಮಾಡುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಇದೀಗ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.jk

ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಂದಾಲ್ ಗೆ ಭೂಮಿ ಪರಭಾರೆ ನಿರ್ಧಾರ ಜಾರಿಯಾಗುವುದಿಲ್ಲ. ಜಿಂದಾಲ್ ಗೆ ಭೂಮಿ ಬಗ್ಗೆ ಹಿಂದಿನ ಸಚಿವ ಸಂಪುಟ  ಸಭೆಯ ನಿರ್ಣಯಕ್ಕೆ ತಡೆ ನೀಡಲಾಗಿದೆ. ಹಿಂದಿನ ಸಚಿವ ಸಂಪುಟ ಸಭೆಯ ಪ್ರಸ್ತಾವನೆಯನ್ನ ಜಾರಿಗೊಳಿಸುವುದಿಲ್ಲ. ಜಿಂದಾಲ್ ಸಂಸ್ಥೆಗೆ ಜಮೀನು ನೀಡುವುದು ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ ಈ ಸಂಪುಟ ಒಪ್ಪಿಗೆ ನೀಡಿಲ್ಲ ಎಂದು ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು . ಇಲ್ಲಿದೆ ಮಾಹಿತಿ…..

ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೇರಿ ಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆ. ಇದಕ್ಕಾಗಿ 90 ಕೋಟಿ ರೂ. ವೆಚ್ಚ ಮಾಡಲಾ್ಗುತ್ತದೆ.ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿ 15% ಬಂಡವಾಳ ಸಬ್ಸಿಯನ್ನು ಕೊಡುವುದು. ಐದು ಕಂತುಗಳಲ್ಲಿ ನೀಡುವುದು. ಗರಿಷ್ಠ 50 ಎಕರೆಗೆ ನಿಗದಿಪಡಿಸುವ ನಿರ್ಧಾರವನ್ನ ಕೈಗೊಳ್ಳಲಾಗಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ತನಿಖೆಗೆ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು. ರಾಜ್ಯಪಾಲರು ಇದನ್ನು ತಿರಸ್ಕರಿಸಿದ್ದರು. ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ.  ಅದಕ್ಕಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹಿಂಡಾಗಿ ಆ್ಯಕ್ಟೀವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ. ಆದಿಚುಂಚನಗಿರಿ ಮಠಕ್ಕೆ ಜಮೀನು ಹಿಂದಿನ ಸಂಪುಟದಲ್ಲಿ ತೀರ್ಮಾನವಾಗಿತ್ತು.  ಬಸವನಗುಡಿ ಲ್ಯಾಂಡ್ 25 ವರ್ಷ ಲೀಸ್ ಮುಂದುವರಿಕೆಗೆ ನಿರ್ಧಾರ ಮಾಡಲಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೊಲ್ಹಾರ್ ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ. ಪಾಂಡವಪುರ, ನಾಗಮಂಗಲ, ಬಹುಗ್ರಾಮ ಕುಡಿಯುವ ನೀರು, ಹುಬ್ಬಳ್ಳಿ-ಧಾರವಾಡ, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೊಳಲ್ಕೆರೆ ತಾಲೂಕಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ ಎಂದರು.

ಸಿಂಗಸಂದ್ರದಲ್ಲಿ 75 ಕೋಟಿ ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್. ಕಲಬುರ್ಗಿಯಲ್ಲಿ ಕಮರ್ಸಿಯಲ್ ಕಾಂಪ್ಲೆಕ್ಸ್. ಮೈಸೂರು ರೋಡ್ ನಿಂದ ಉತ್ತರ ಹಳ್ಳಿ ರೋಡ್ 25.7 ಕೋಟಿ ರೂ. ಕನಕಪುರ ಸಿಟಿ ಮುನ್ಸಿಪಲ್ ಕೋರ್ಟ್ 7 ರಿಂದ 10 ಕೋಟಿಗೆ ಹೆಚ್ಚಳ. ಕಲಬುರ್ಗಿ ನಗರದಲ್ಲಿ 50-50 ಮಾದರಿಯಲ್ಲಿ ಬಿಲ್ಡಿಂಗ್.

ಹಾಸನದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ. ಅಣ್ಣಿಗೆರೆ, ಸುರಪುರ, ಶಾಹಾಪುರ, ಶಿವಮೊಗ್ಗ, ಹೊನ್ನಾಳಿ ಟೌನ್‌ಗಳ ಕುಡಿಯುವ ನೀರು ಯೋಜನೆಗೆ 770 ಕೋಟಿ ರೂ ನೀಡಲು ತೀರ್ಮಾನ.

ಜಿಂದಾಲ್‌ ಗೆ ಜಮೀನು ನೀಡುವ ಮುಂದೆ ಏನು ಆಗುತ್ತದೆ ಎನ್ನುವ ಬಗ್ಗೆ ಗೊತ್ತಿಲ್ಲ. ಜಿಂದಾಲ್ ಕುರಿತು ಹೈ ಕೋರ್ಟ್ ನಲ್ಲಿ ಪಿಐಎಲ್ ಇದೆ. ಸುಪ್ರೀಂಕೋರ್ಟ್‌ನಲ್ಲಿಯೂ ಪ್ರಕರಣ ಇದೆ. ಅವತ್ತು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈಗ ಪಿಐಎಲ್ ಆಧಾರದಲ್ಲಿ  ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.  ಹೀಗಾಗಿ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್-19 ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ವಾರ್ಡ್ ಆರಂಭಿಸುವುದು. ಅಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು.

Key words: Jindal – not implemented – land – decision-Minister- Basavaraja Bommai -Cabinet meeting