Sunday, September 27, 2026

BDA Apartments

ದೆಹಲಿಗೆ ಹೋಗಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸಿ.ಪಿ ಯೋಗೇಶ್ವರ್… BDA JK_Adv BDA Adv
Home Front Page ದೆಹಲಿಗೆ ಹೋಗಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸಿ.ಪಿ ಯೋಗೇಶ್ವರ್…

ದೆಹಲಿಗೆ ಹೋಗಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸಿ.ಪಿ ಯೋಗೇಶ್ವರ್…

ಬೆಂಗಳೂರು,ಮೇ,27,2021(www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆಯುತ್ತಿದ್ದು ಕೆಲ ಶಾಸಕರು ಸಚಿವರು ಇದರಲ್ಲಿ ತೊಡಗಿದ್ದು, ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.  ಈ ವಿಚಾರದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೆಸರೂ ಕೇಳಿ ಬಂದಿದೆ.jk

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ ಯೋಗೇಶ್ವರ್ ,  ನಾನು ದೆಹಲಿಗೆ ಹೋಗಿದ್ದು ನಿಜ. ನಾನು ಯಾವಾಗಲೂ ದೆಹಲಿಗೆ ಹೋಗ್ತೀನಿ ಬರ್ತೀನಿ. ನನ್ನ ವೈಯಕ್ತಿಕ ಕಾರಣಕ್ಕಾಗಿ ನಾನು ದೆಹಲಿಗೆ ಹೋಗಿದ್ದೆ. ಯಾವ ವಿಚಾರಕ್ಕೆ ನಾನು ದೆಹಲಿಗೆ ಹೋಗಿದ್ದೆ ಎಂದು ಹೇಳಲು ಹೋಗಲ್ಲ.  ಹೀಗಾಗಿ ಬಲವಂತವಾಗಿ ನನ್ನ ಹತ್ತಿರ ಏನು ಹೇಳಿಸಬೇಡಿ ಎಂದು ತಿಳಿಸಿದ್ದಾರೆ.

ದೆಹಲಿಗೆ ಏಕೆ ಹೋಗಿದ್ದೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಈಗ ನಾಯಕತ್ವ ಬದಲಾವಣೆ ವಿಚಾರ ಏಕೆ ಚರ್ಚೆಯಾಯಿತು ಎಂಬುದು ಗೊತ್ತಿಲ್ಲ. ನನಗೆ ನನ್ನದೆಯಾದ ಸಮಸ್ಯೆಗಳು ಇವೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕಿದೆ. ಹೀಗಾಗಿ ನೋವು ಹೇಳಿಕೊಳ್ಳಲು ದೆಹಲಿಗೆ ಹೋಗಿದ್ದೆ. ಅದನ್ನ ಬಹಿರಂಗವಾಗಿ ಹೇಳಿಕೊಳ್ಳಲು ಆಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words: Minister -CP Yogeshwar – clarified – visit – Delhi.