Sunday, September 27, 2026

BDA Apartments

ಟೌನ್ ಶಿಪ್ ವಿರುದ್ದ ಜೆಡಿಎಸ್ ಪಾದಯಾತ್ರೆ ಮುಕ್ತಾಯ: ಆ.18ಕ್ಕೆ ವಿಧಾನಸೌಧಕ್ಕೆ ...
Home Front Page ಟೌನ್ ಶಿಪ್ ವಿರುದ್ದ ಜೆಡಿಎಸ್ ಪಾದಯಾತ್ರೆ ಮುಕ್ತಾಯ: ಆ.18ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಘೋಷಿಸಿದ ನಿಖಿಲ್

ಟೌನ್ ಶಿಪ್ ವಿರುದ್ದ ಜೆಡಿಎಸ್ ಪಾದಯಾತ್ರೆ ಮುಕ್ತಾಯ: ಆ.18ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಘೋಷಿಸಿದ ನಿಖಿಲ್

ಬೆಂಗಳೂರು,ಆಗಸ್ಟ್,10,2026 (www.justkannada.in):  ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಪಾದಯಾತ್ರೆ ಎರಡೇ ದಿನಕ್ಕೆ ಮುಕ್ತಾಯಗೊಂಡಿದೆ.

ಬಿಡದಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು  ಬೆಂಗಳೂರು ಪ್ರವೇಶಕ್ಕೂ ಮುನ್ನ ಪೊಲೀಸರು ತಡೆದರು. ಈ ಹಿನ್ನೆಲೆಯಲ್ಲಿ  ಪರಿಣಾಮ ಭಾರಿ ಹೈಡ್ರಾಮಾವೇ ನಡೆದಿದ್ದು, ಹೋರಾಟಗಾರರು ಹೆಜ್ಜಾಲ ಬಳಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಬಂದಿದ್ದ ಕಾರಣ ಕ್ರೈಸ್ಟ್ ಕಾಲೇಜು ಬಳಿ ರಸ್ತೆಗೆ ಅಡ್ಡಲಾಗಿ ಬಸ್ ನಿಲ್ಲಿಸಿ ಪಾದಯಾತ್ರೆಯನ್ನು ಪೊಲೀಸರು ತಡೆದರು. ಈ ಸಮಯದಲ್ಲಿ ಜೆಡಿಎಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದು, ಪೊಲೀಸರ ಜೊತೆಗೆ ತೀವ್ರ ವಾಗ್ವಾದ ನಡೆಸಿದರು.ಟೌನ್ ಶಿಪ್ ವಿರುದ್ದ ಜೆಡಿಎಸ್ ಪಾದಯಾತ್ರೆ ಮುಕ್ತಾಯ nikil kumaraswamy

ನಂತರ  ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮುಕ್ತಾಯದ ಬಗ್ಗೆ ತಿಳಿಸಿದರು. ಆಗಸ್ಟ್ 18ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ವಿಧಾನ  ಸೌಧದಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದರು.  ಈ ಮೂಲಕ ಮೂರು ದಿನಗಳ ಕಾಲ ನಡೆಯಬೇಕಿದ್ದ ಪಾದಯಾತ್ರೆ ಎರಡೇ ದಿನಕ್ಕೆ ಮುಕ್ತಾಯವಾಯಿತು.ಆ.18ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಘೋಷಿಸಿದ ನಿಖಿಲ್ jk02_new jk02 new

Key words: JDS Padayatre, against, Township, ends