Saturday, October 17, 2026

Dasara Wishes

Happy Dasara
Home Front Page ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರಿತಿಬ್ಬೇಗೌಡ.

ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರಿತಿಬ್ಬೇಗೌಡ.

ಹುಬ್ಬಳ್ಳಿ, ಮಾರ್ಚ್,21,2024(www.justkannada.in):  ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ  ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿರುವ  ಸಭಾಪತಿ ಬಸವರಾಜ ಹೊರಟ್ಟಿ ನಿವಾಸಕ್ಕೆ ತೆರಳಿ ಮರಿತಿಬ್ಬೇಗೌಡ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆಯನ್ನ  ಬಸವರಾಜ ಹೊರಟ್ಟಿ ಅಂಗೀಕಾರ ಮಾಡಿದ್ದಾರೆ. ಹೆಚ್​ಡಿ ದೇವೇಗೌಡ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ ಮರಿತಿಬ್ಬೇಗೌಡ ಅವರು  ಜೆಡಿಎಸ್ ಪಕ್ಷಕ್ಕೂ ಗುಡ್ ​ಬೈ ಹೇಳಿದ್ದಾರೆ.ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರಿತಿಬ್ಬೇಗೌಡ marithibbegowda

ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಮರಿತಿಬ್ಬೇಗೌಡ, ಮುಂದಿನ ಅವಧಿಗೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ಸಭಾಪತಿಗಳು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಸಭಾಪತಿಗೆ ಧನ್ಯವಾದಗಳು. ಅಲ್ಲದೆ, ಕೆಲವು ವೈಯಕ್ತಿಕ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಹೆಚ್ ಡಿ ದೇವೆಗೌಡ, ಹೆಚ್. ​ಡಿ ಕುಮಾರಸ್ವಾಮಿ ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ. ನಿಷ್ಠಾವಂತರನ್ನು ಕಡೆಗಣನೆ ಮಾಡಿದ್ದಾರೆ. ನಾವು ಈ ವಿಷಯ ಅವರಿಗೆ ಹೇಳಿದರೆ, ಅದು ನಮ್ಮ ವರಿಷ್ಠರಿಗೆ ಹಿಡಿಸಲಿಲ್ಲ ಎಂದು  ಮರಿತಿಬ್ಬೇಗೌಡ ಅಸಮಾಧಾನ  ವ್ಯಕ್ತಪಡಿಸಿದರು.

Key words:JDS- Marithibbe Gowda- resigned –MLC-Position