ಮೆಟ್ರೋ ರೈಲ್ವೆ  ಟ್ರ್ಯಾಕ್ ಗೆ ಜಿಗಿದು ಯುವಕ ಆತ್ಮಹತ್ಯೆಗೆ ಶರಣು: ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ.

ಬೆಂಗಳೂರು,ಮಾರ್ಚ್,21,2024(www.justkannada.in): ಮೆಟ್ರೋ ರೈಲ್ವೆ  ಟ್ರ್ಯಾಕ್ ಗೆ ಜಿಗಿದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಉತ್ತರ ಭಾರತದಿಂದ ಬಂದಂತಹ ಯುವಕ ಎನ್ನಲಾಗಿದ್ದು,  ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲು ಬರುವ ವೇಳೆ ಟ್ರ್ಯಾಕ್ ಗೆ ಜಿಗಿದಿದ್ದಾನೆ. ಈ ವೇಳೆ  ಗಾಯಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸ್ಥಳಕ್ಎಕ ಬಿಎಂಆರ್ ಸಿಎಲ್  ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಂದ್ರಾ ಲೇಔಟ್ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಮೆಟ್ರೋ ಸಂಚಾರ ಸ್ಥಗಿತ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: commits -suicide -jumping – metro railway –track-bangalore