Sunday, September 13, 2026

BDA Apartments

Home Front Page ನಮಗೆ ಹಣ ಬಲವಿಲ್ಲ, ಜನಬಲವಿದೆ: ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ- ಮಾಜಿ ಪ್ರಧಾನಿ ಹೆಚ್.ಡಿ...

ನಮಗೆ ಹಣ ಬಲವಿಲ್ಲ, ಜನಬಲವಿದೆ: ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೆ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ಬೆಂಗಳೂರು,ಏಪ್ರಿಲ್,25,2023(www.justkannada.in): ನಮಗೆ ಹಣಬಲವಿಲ್ಲ, ಜನಬಲವಿದೆ. ಜನಾಶೀರ್ವಾದದಿಂದ ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ದೇವೇಗೌಡರು,  ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ರಾಜ್ಯದ ಹಲವೆಡೆ ನಾನು ಕುಮಾರಸ್ವಾಮಿ ಪ್ರಚಾರ ಮಾಡುತ್ತೇವೆ. ಮೇ 8ರವರೆಗೆ  ನಾವಿಬ್ಬರು ನಿರಂತರ ಪ್ರಚಾರ ಮಾಡುತ್ತೇವೆ. ನಾನು 42  ಹೆಚ್.ಡಿಕೆ 40ರಿಂದ 48 ಕಡೆ ಪ್ರಚಾರ ಮಾಡಲಿದ್ದಾರೆ. ಪ್ರತಿದಿನ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚಿಸುವೆ ಎಂದರು.ನಮಗೆ ಹಣ ಬಲವಿಲ್ಲ hdd

ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಟೀಕೆ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು,  ಪ್ರತಿಯೊಬ್ಬರಿಗೂ ಹೇಳುವ ಭಾವನೆ ಇದೆ. ಅಮಿತ್ ಶಾ ಮಾತನಾಡಿದ್ದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

Key words: JDS -come – power -own-Former Prime Minister -HD Deve Gowda.