ಬೆಂಗಳೂರು, ಅಕ್ಟೋಬರ್, 29,2026 (www.justkannada.in): ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ರೈತರಿಗೆ ಘೋಷಣೆ ಮಾಡಲಾಗಿರುವ 2500 ರೂ ಬರ ಪರಿಹಾರವನ್ನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.
ವಿಶೇಷ ಅಧಿವೇಶನದಲ್ಲಿ ರೈತರಿಗೆ ಬರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಬರ ಪೀಡಿತ ತಾಲೂಕುಗಳ ರೈತರಿಗೆ 2,500 ರೂ ಪರಿಹಾರ ಕೊಡಲು ತೀರ್ಮಾನಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿತ್ತು. ರೈತರಿಗೆ 25000 ರೂ ಪರಿಹಾರ ನೀಡುವಂತೆ ಆಗ್ರಹಿಸಲಾಗಿತ್ತು.
ಇದೀಗ ಸರ್ಕಾರ ರೈತರಿಗೆ 2500 ರೂ. ಬರ ಪರಿಹಾರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಬರ ಪರಿಹಾರ ಪಡೆಯಲು ರೈತರು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಅತೀ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರವರೆಗೆ ಆರೋಹಣ ಕ್ರಮದಲ್ಲಿ ಹಣ ಪಾವತಿ ಮಾಡಲಗುತ್ತದೆ. ಮೊದಲು ಮಳೆಯಾಶ್ರಿತ ಬೆಳೆ, ನಂತರ ನೀರಾವರಿ ಮತ್ತು ಕೊನೆಯದಾಗಿ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ನೀಡಲಾಗುತ್ತದೆ. ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ ಗೆ ಮಾತ್ರ ಈ ಪರಿಹಾರ ಸೀಮಿತವಾಗಿದೆ.






