ಬೆಂಗಳೂರು, ಅಕ್ಟೋಬರ್, 29,2026 (www.justkannada.in) : ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಹಾಲಿನ ದರ ಪ್ರತಿಲೀಟರ್ ಗೆ ಬರೊಬ್ಬರಿ 8 ರೂ. ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಪ್ರತಿಲೀಟರ್ ಗೆ 8 ರೂ. ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಈ 8ರೂಪಾಯಿ ಪೈಕಿ ಹಾಲು ಉತ್ಪಾದಕರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದೆ. ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ.
ಈ ನಡುವೆ ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದ್ದು ಇಲಾಖೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ, ನವೆಂಬರ್ 5 ರಂದು ಸಾರಿಗೆ ದರ ಹೆಚ್ಚಳ ತೀರ್ಮಾನವಾಗಲಿದೆ.
State Government, Decision, increase, price, Nandini milk, Rs 8.











