ಮುಂದಿನ ವಾರದಿಂದ ಅಮುಲ್ ಹಾಲು ಅಧಿಕೃತ ಮಾರಾಟ: ನಂದಿನಿಯೊಂದಿಗೆ ಪೈಪೋಟಿ ಇಲ್ಲ ಎಂದ ಜಯನ್ ಮೆಹ್ತಾ

ಬೆಂಗಳೂರು,ಏಪ್ರಿಲ್,8,2023(www.justkannada.in):  ರಾಜ್ಯದಲ್ಲಿ ಅಮುಲ್  ಹಾಲು ಮೊಸರು ಮಾರಾಟಕ್ಕೆ ವಿರೋಧ ವ್ಯಕ್ತವಾಗಿದ್ದು ಈ ಬೆನ್ನಲ್ಲೇ ಮುಂದಿನ ವಾರದಿಂದ ಅಮುಲ್ ಹಾಲು ಅಧಿಕೃತ ಮಾರಾಟ ಆರಂಭಿಸಲಿದೆ. ಆದರೆ ನಂದಿನಿಯೊಂದಿಗೆ ಪೈಪೋಟಿ ಇಲ್ಲ ಎಂದು ಅಮುಲ್ ಎಂಡಿ ಜಯನ್ ಮೆಹ್ತಾ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಜಯನ್ ಮೆಹ್ತಾ, ಮುಂದಿನ ವಾರ ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಆರಂಭವಾಗಲಿದೆ. ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು, ಮೊಸರು ಪೂರೈಕೆಯಾಗಲಿದೆ. ಸದ್ಯಕ್ಕೆ ಆನ್ ಲೈನ್ ನಲ್ಲಿ  ಮಾತ್ರ ಹಾಲು  ಮಾರಾಟ  ಆರಂಭವಾಗಲಿದೆ. ಇ-ಕಾರ್ಮಸ್ ಮೂಲಕ ಅಮುಲ್​ ಹಾಲು, ಮೊಸರು ಮಾರಾಟ ಮಾಡುತ್ತೇವೆ. ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸಲ್ಲ ಎಂದಿದ್ದಾರೆ.

ಅಮುಲ್​​ ಹಾಗೂ ಕೆಎಂಎಫ್ ಸಂಬಂಧ ಚೆನ್ನಾಗಿದೆ. ನಂದಿನಿ ಹಾಲಿನ ಮಳಿಗೆ ರೀತಿ ನಾವು ಸ್ಟಾಲ್, ಬೂತ್​ ಹಾಕುವುದಿಲ್ಲ ಯಾರಿಗೆ ಅಮುಲ್ ಉತ್ಪನ್ನ ಬೇಕೋ ಅವರು ಇ- ಕಾರ್ಮಸ್ ಪ್ಲಾಟ್​ಫಾರ್ಮ್ ಮೂಲಕ ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.

Key words: Jayan Mehta – Amul -milk – sale – next week