‘ಶ್ರೀನಿವಾಸ ಕಲ್ಯಾಣ’ದ ಬಳಿಕ Old Monk ಜೊತೆ ಬಂದ ಶ್ರೀನಿ !

ಬೆಂಗಳೂರು ಡಿಸೆಂಬರ್ 23, 2019 (www.justkannada.in): ಸ್ಯಾಂಡಲ್​ವುಡ್​ ನಟ, ನಿರ್ದೇಶಕ ಶ್ರೀನಿ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ.

‘ಶ್ರೀನಿವಾಸ ಕಲ್ಯಾಣ’ ಹಾಗೂ ‘ಬೀರ್​ ಬಲ್’​ ಸಿನಿಮಾಗಳನ್ನು ಪರಿಚಯಿಸಿರುವ ಶ್ರೀನಿ ಇದೀಗ ‘ಓಲ್ಡ್​ ಮಾಂಕ್’ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಮುಂದಿನ ವರ್ಷ ‘ಓಲ್ಡ್​ ಮಾಂಕ್’​ ಚಿತ್ರವನ್ನು ಸಿನಿ ಪ್ರಿಯರಿಗೆ ತೋರಿಸುವತ್ತ ಚಿತ್ತ ಹರಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಇತ್ತೀಚೆಗೆ ‘ಓಲ್ಡ್​ ಮಾಂಕ್’​ ಸಿನಿಮಾದ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

‘ಓಲ್ಡ್​ ಮಾಂಕ್’​ ಸಿನಿಮಾಗೆ ಪ್ರಸನ್ನ ವಿ ಎಂ, ಸಂತೋಷ್​ ನಂದಕುಮಾರ್​ ಹಾಗೂ ಶ್ರೀನಿ ಕಥೆ ಬರೆದಿದ್ದಾರೆ.