ನಂದಿನಿ ಕನ್ನಡಿಗರ ಆಸ್ಮಿತೆ: ಗುಜರಾತ್ ಗೆ ಅಡವಿಟ್ಟರೆ ಒಪ್ಪಲ್ಲ-ಸರ್ಕಾರದ ವಿರುದ‍್ಧ ಹೆಚ್.ವಿಶ್ವನಾಥ್ ಕಿಡಿ.

ಮೈಸೂರು,ಏಪ್ರಿಲ್,8,2023(www.justkannada.in): ಅಮುಲ್ ಮೂಲಕ ನಂದಿನಿ ಹಾಲಿನ ಬ್ರ್ಯಾಂಡ್ ಮುಗಿಸಲು  ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಕುರಿತು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್,  ಎಲ್ಲವನ್ನು ಗುಜರಾತ್ ಕೊಂಡೊಯ್ಯುತ್ತಿದಾರೆ. ನಂದಿನಿ ಕನ್ನಡಿಗರ ಆಸ್ಮಿತೆ. ನಂದಿನಿಯನ್ನ ಗುಜರಾತ್ ಗೆ  ಅಡವಿಟ್ಟರೆ ಒಪ್ಪಲ್ಲ ಕರ್ನಾಟಕದಲ್ಲಿ ಎಂತೆಂತಹ ಸಿಎಂಗಳನ್ನ ನೋಡಿದ್ದೇವೆ. ಯಾವ ಸಿಎಂ ಕೂಡ ಈ ರೀತಿ ಮಾತನಾಡಿಲ್ಲ. ಸಿಎಂ ಸ್ಥಾನಕ್ಕೆ ಘನತೆ ಗೌರವ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Identity – Nandini- Kannadigas-H. Vishwanath – against – government