Friday, August 14, 2026

BDA Apartments

Home Front Page ಸೋಮವಾರ ಜೆಡಿಎಸ್  ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ- ಹೆಚ್.ಡಿ ಕುಮಾರಸ್ವಾಮಿ.

ಸೋಮವಾರ ಜೆಡಿಎಸ್  ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ- ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಏಪ್ರಿಲ್,8,2023(www.justkannada.in): ಸೋಮವಾರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ರಾಮನಗರದ ಕೇತಗಾನಹಳ್ಳಿಯಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಮುಳುಗಿಸಲು ಶಾಸಕರನ್ನ ಕರೆದುಕೊಂಡು ಹೋದರು. ಇದೀಗ ಕಾಂಗ್ರೆಸ್ ನಿಂದಲೇ ಜೆಡಿಎಸ್ ಗೆ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ 15 ಮುಖಂಡರು ಜೆಡಿಎಸ್ ಗೆ ಬರುತ್ತಿದ್ದಾರ.  ರಘು  ಆಚಾರ್ ನಮ್ಮ ಜೊತೆ ಮಾತನಾಡಿದ್ದಾರೆ . ಜೆಡಿಎಸ್ ಸೇರುತ್ತೇನೆ ಅಂತಾ ಅವರೇ ಹೇಳಿದ್ದಾರೆ ಎಂದರು.

ನಂದಿನಿ ಮತ್ತು ಅಮುಲ್ ವಿವಾದ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಕರ್ನಾಟಕವನ್ನ ಗುಜರಾತ್ ಮಾಡಲು ಹೊರಟಿದ್ದಾರೆ. ರೈತರ ಬದುಕಿನ ಜೊತೆ ಆಟವಾಡುತ್ತಿದ್ದಾರೆ. ಗುಜರಾತ್ ನಾಯಕರ ಮೆಚ್ಚಿಸಲು ಮುಂದಾಗಿದ್ದಾರೆ.  ಕೆಎಂಎಫ್ ಗೆ ಬಿಜೆಪಿ ಕೊಡುಗೆ ಏನು..? ಎಂದು ಪ್ರಶ್ನಿಸಿದರು.

Key words: 2nd list -JDS –candidates- released – Monday- HD Kumaraswamy.