ಜಗ್ಗೇಶ್-ಗುರುಪ್ರಸಾದ್ ಜೋಡಿ ಸಿನಿಮಾ ಶೂಟಿಂಗ್ ಏಪ್ರಿಲ್’ನಿಂದ ಶುರು

ಬೆಂಗಳೂರು, ಮಾರ್ಚ್ 05, 2020 (www.justkannada.in): ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ರಂಗನಾಯಕ.

ಈ ಸಿನಿಮಾ ಅನೌನ್ಸ್ ಮಾಡಿ ಹಲವು ದಿನಗಳೇ ಆಗಿವೆ. ಇದೀಗ ಶೂಟಿಂಗ್ ಶುರು ಮಾಡಲು ಡೇಟ್ ಫಿಕ್ಸ್ ಆಗಿದೆ. ‘ಮಠ’ ಬಳಿಕ ಜಗ್ಗೇಶ್-ಗುರು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದೆ.

ಗುರುಪ್ರಸಾದ್ ನಿರ್ದೇಶನ ಜಗ್ಗೇಶ್ ನಾಯಕ ಎಂದ ಕೂಡಲೇ ಈ ಸಿನಿಮಾ ಬಗ್ಗೆಯೂ ನಿರೀಕ್ಷೆ ಸಾಕಷ್ಟಿದೆ. ಏಪ್ರಿಲ್ 2 ರಿಂದ ಶೂಟಿಂಗ್ ರಂಗನಾಯಕ ಆರಂಭವಾಗಲಿದೆ. ಜಗ್ಗೇಶ್ ಸದ್ಯಕ್ಕೆ ತೋತಾಪುರಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ಇದಾದ ಬಳಿಕ ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ.