Sunday, August 23, 2026

BDA Apartments

Home Front Page ಮಾಜಿ ಸಿಎಂ ಬಿಎಸ್ ವೈ ಭೇಟಿ ಮಾಡಿದ ಜಗದೀಶ್ ಶೆಟ್ಟರ್: ಟಿಕೆಟ್ ಫಿಕ್ಸ್..?

ಮಾಜಿ ಸಿಎಂ ಬಿಎಸ್ ವೈ ಭೇಟಿ ಮಾಡಿದ ಜಗದೀಶ್ ಶೆಟ್ಟರ್: ಟಿಕೆಟ್ ಫಿಕ್ಸ್..?

ಬೆಂಗಳೂರು,ಏಪ್ರಿಲ್,13,2023(www.justkannada.in):  ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೈತಪ್ಪುವ ಭೀತಿಯಲ್ಲಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ತೆರಳಿ ವರಿಷ್ಠರನ್ನ ಭೇಟಿಯಾಗಿ ಮಾತುಕತೆ ನಡೆಸಿ ಬೆಂಗಳೂರಿಗೆ ವಾಪಸ್  ಆಗಿದ್ದರು. ಇದೀಗ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಅವರನ್ನೂ ಭೇಟಿ ಮಾಡಿದ್ದಾರೆ.

ದೆಹಲಿಯಿಂದ ವಾಪಸಾದ ಬಳಿಕ ನೇರವಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನ ಜಗದೀಶ್ ಶೆಟ್ಟರ್​ ಭೇಟಿ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಬಿಎಸ್​ವೈ ಜೊತೆ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದ್ದಾರೆ.

ಈ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ನಾನು ಸ್ಪರ್ಧಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರ ಬಳಿ ಹೇಳಿದ್ದೇನೆ. ಅದೇ ವಿಚಾರವನ್ನೂ ಬಿಎಸ್ ಯಡಿಯೂರಪ್ಪರಿಗೂ ತಿಳಿಸಿದ್ದೇನೆ. ಬಿಎಸ್  ವೈ ಸಹ ಸ್ಪರ್ಧಿಸಿ ಎಂದು ತಿಳಿಸಿದ್ದಾರೆ.  ಎಲ್ಲವೂ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

Key words: Jagdish Shettar -met -former CM –BS Yeddyurappa