ಪ್ರಬಲರೂ ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದು ವಿಷಾದನೀಯ: ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ

ಬೆಂಗಳೂರು, ಜನವರಿ 04, 2019 (www.justkannada.in): ರಾಷ್ಟ್ರದಾದ್ಯಂತ ಪ್ರಬಲ ಹಾಗೂ ಮುಂದುವರೆದ ಜಾತಿ ಸಮುದಾಯಗಳು, ಅನರ್ಹರು ಮೀಸಲಾತಿ ಪಟ್ಟಿಯೊಳಗೆ ಸೇರಿ, ಸೌಲಭ್ಯಗಳನ್ನು ಪಡೆಯುತ್ತಿರುವುದು ವಿಷಾದ ನೀಯ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.

ಅನರ್ಹರು ಮೀಸಲಾತಿಸೌಲಭ್ಯ ಪಡೆದರೆ ಕಳ್ಳತನ‌ಮಡಿದಷ್ಟೇ ಅಪರಾಧವಾಗಿದೆ. ಸರ್ಕಾರಗಳು ಒತ್ತಡಕ್ಕೆ ಮಣಿಯದೇ ಅರ್ಹರಿಗೆ ಮಾತ್ರ ಮೀಸಲಾತಿ ಸೌಲಭ್ಯ ನೀಡಬೇಕು. ಕರ್ನಾಟಕದಲ್ಲೂ ಕೆಲವು ಮುಂದುವರೆದ ಜಾತಿಗಳು ಮೀಸಲಾತಿ ಪಟ್ಟಿಯೊಳಗೆ ಸೇರ್ಪಡೆಯಾಗಿರುವುದು ದುರ್ದೈವ. ಇದರಿಂದ ಅರ್ಹರು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಒಂದೇ ಮಾರ್ಗವಿರುವುದು. ಶಿಕ್ಷಣ ಪಡೆದಾಗ ಮಾತ್ರ ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಸಾಮಜಿಕ ವ್ಯವಸ್ಥೆ ಸುಧಾರಣೆ ಯಾಗುತ್ತದೆ. ಅನರ್ಹರಿಗೆ ಮೀಸಲಾತಿ ಸೌಲಭ್ಯಗಳು ದೊರಕದಂತೆ ಕ್ರಮಕೈಗೊಳ್ಳಲು  ಜಿಲ್ಲಾಧಿಕಾರಿಗಳಿಗೆ ಪರಮಾಧಿಕಾವಿದೆ. ಆದರೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ‌ಕ್ರಮಕೈಗೊಳ್ಳುತ್ತಿಲ್ಲ. ವೋಟ್ ಬ್ಯಾಂಕ್ ಗೆ ಒತ್ತಡಕ್ಕೆ ಒಳಗಾಗಬಾರದು.ಈ ವಿಷಯದಲ್ಲಿ ತಮಗೂ ಒತ್ತಡಗಳು ಬರುತ್ತಿವೆ. ಆದರೆ ಯಾವುದೇ ಒತ್ತಡಗಳಿಗೆ ತಾವು ಮಣಿದಿಲ್ಲ. ಅರ್ಹರೆಲ್ಲರೂ ಮೀಸಲಾತಿಯೊಳಗೆ ಸೇರಬೇಕು ಎಂದು ತಿಳಿಸಿದರು.
ಅಲೆಮಾರಿಗಳ ಅಭಿವೃದ್ಧಿ ಕೋಶಕ್ಕೆ 106ಕೋಟಿ ರೂ ನೀಡಲಾಗಿದೆ ಎಂದು ತಿಳಿಸಿದರು.