Tuesday, September 22, 2026

BDA Apartments

ಮೈಸೂರಿನ ಎಸ್.ಜೆಸಿಇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ BDA JK_Adv BDA Adv
Home Front Page ಮೈಸೂರಿನ ಎಸ್.ಜೆಸಿಇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೈಸೂರಿನ ಎಸ್.ಜೆಸಿಇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೈಸೂರು, ಜನವರಿ 04, 2019 (www.justkannada.in): ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ 10ನೇ ಪದವಿ ಪ್ರದಾನ ಸಮಾರಂಭ ಜೆಸಿ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಹಿರಿಯ ನ್ಯಾಯಾಧೀಶರಾದ ಅಶೋಕ್ ಜಿ.ನಿಜಗಣ್ಣವರ್ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರುಮಠ್ ಪದಕ ವಿತರಿಸಿದರು.

ಬಯೋಟೆಕ್ನಾಲಜಿ ವಿಭಾಗದಲ್ಲಿ ನಿಶ್ಚಯ ಪ್ರಸಾದ್, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಲೋಚನ ಎಂ, ಕಂಪ್ಯೂಟರ್ ಸೈನ್ಸ್‌ ವಿಭಾಗದಲ್ಲಿ ಅಮೃತವರ್ಷಿನಿ ಸುಂದರ್ ಸೇರಿ ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ 12 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ. ಶಿಕ್ಷಣ ಸಂಸ್ಥೆ ಸಲಹೆಗಾರರಾದ ಪ್ರೊ.ಎಂ.ಎಚ್.ಧನಂಜಯ, ಪ್ರಾಂಶುಪಾಲ ಪ್ರೊ.ಟಿ.ಎನ್.ನಾಗಭೂಷಣ್ ಸೇರಿ ಹಲವರು ಉಪಸ್ಥಿತಿ.