ಮೈಸೂರಲ್ಲಿ ಬ್ರಾಹ್ಮಣರ ವೇಷ ಧರಿಸಿ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳ ಪೊಲೀಸರ ಬಲೆಗೆ

ಮೈಸೂರು, ಜನವರಿ 04, 2019 (www.justkannada.in): ಬ್ರಾಹ್ಮಣರ ವೇಷ ಧರಿಸಿ ಕಳ್ಳತನ ಮಾಡಲು ಯತ್ನಿಸಿದ ಕಳ್ಳನನ್ನ ರೆಡ್ ಹ್ಯಾಂಡಾಗಿ ಹಿಡಿದು ಸ್ಥಳೀಯರು ಥಳಿಸಿದ್ದಾರೆ.

ಮೈಸೂರಿನ ರಾಮಾನುಜ ರಸ್ತೆಯಲ್ಲಿ ಘಟನೆ ನಡೆದಿದ್ದು, ದೇವಾಲಯಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಕಳ್ಳತನ ಯತ್ನಿಸಿದ್ದ. ಮನೆಗಿ ಬಂದು ನಂಬಿಸುತ್ತಿದ್ದ ಚಾಲಾಕಿ ಕಳ್ಳ. ಪಚ್ಚೆ ಶೆಲ್ಯ ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ.

ನಂತರ ಮನೆಯವರನ್ನ ನಂಬಿಸಿ ಮನೆಯಲ್ಲೆ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಖದೀಮನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿದ್ದಾರೆ.

ತಾನು ಭದ್ರಾವತಿಯ‌ ನಿವಾಸಿ ಎಂದು ಹೇಳಿಕೊಂಡಿರುವ ಪ್ರವೀಣ್ ಎಂಬಾತ ರಾಮಾನುಜ ರಸ್ತೆಯ ಮನೆಯಲ್ಲಿ ಕಳ್ಳತನ ಮಾಡಿ ಗೂಸ ತಿಂದಿದ್ದಾನೆ. ಎರಡನೇ ಬಾರಿ ಕದಿಯಲು ಬಂದು ಸಿಕ್ಕಿ ಬಿದ್ದಿದ್ದಾನೆ.

ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಪ್ರವೀಣ್. ಈ ಹಿಂದೆ ಮನೆಯೊಂದರಲ್ಲು ೫೦ ಸಾವಿರ ಕದ್ದಿದ್ದ. ಸದ್ಯ ಕೆ.ಆರ್.ಪೊಲೀಸರ ಅತಿಥಿಯಾಗಿರುವ ಕಳ್ಳ.