ಈಶ್ವರಪ್ಪ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ : ಟ್ವಿಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಟೀಕೆ 

ಬೆಂಗಳೂರು,ಅಕ್ಟೋಬರ್,09,2020(www.justkannada.in) : ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದಂತಾಗಿರುವ ಕೆ.ಎಸ್. ಈಶ್ವರಪ್ಪನವರೇ ಆಗಾಗ ನಿಮ್ಮ ಇರುವಿಕೆ ತೋರಲು ಹೆಣಗುತ್ತಿರುವುದು ಕನಿಕರ ತರಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.jk-logo-justkannada-logo

ಚುನಾವಣೆ ಹತ್ತಿರ ಬಂದಾಗಲೆಲ್ಲಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರ ಕುಮಾರನ ಪೌರುಷ ತೋರುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.Ishwarappa,Not,Playing,Not,Counting,State,Congress,Remarks,Twitter

ರಾಜ್ಯ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದ್ದು, ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದಂತಾಗಿರುವ ಕೆ.ಎಸ್. ಈಶ್ವರಪ್ಪನವರೇ ಆಗಾಗ ನಿಮ್ಮ ಇರುವಿಕೆ ತೋರಲು ಹೆಣಗುತ್ತಿರುವುದು ಕನಿಕರ ತರಿಸುತ್ತದೆ. ನೆರೆಪರಿಹಾರ, ಬರಪರಿಹಾರ, ಜಿಎಸ್ ಟಿ ಪಾಲು, ಪಿಎಂ ಕೇರ್ಸ್ ನೆರವು ಇವ್ಯಾವುದನ್ನು ಮೋದಿ ಎದುರು ಧ್ವನಿ ಎತ್ತರಿಸಿ ಕೇಳಲಾಗದ ಹೇಡಿಗಳು, ಉತ್ತರಕುಮಾರರು ಯಾರೆಂದು ರಾಜ್ಯದ ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ.

Ishwarappa-Not-Playing-Not-Counting-State-Congress- Remarks-Twitter

key words : Ishwarappa-Not-Playing-Not-Counting-State-Congress- Remarks-Twitter