Monday, October 12, 2026

Dasara Wishes

Happy Dasara
Home Front Page ಐಪಿಎಲ್ ಕಿರೀಟಕ್ಕಾಗಿ ಇಂದು ಚೆನ್ನೈ-ಮುಂಬಯಿ ಹಣಾಹಣಿ!

ಐಪಿಎಲ್ ಕಿರೀಟಕ್ಕಾಗಿ ಇಂದು ಚೆನ್ನೈ-ಮುಂಬಯಿ ಹಣಾಹಣಿ!

ಹೈದರಾಬಾದ್‌, ಮೇ 12, 2019 (www.justkannada.in): ಹೈದರಾಬಾದ್‌ನಲ್ಲಿ ಇಂದು ನಡೆಯಲಿರುವ ಐಪಿಎಲ್‌ 12ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬಯಿ ಇಂಡಿಯನ್ಸ್‌ ತಂಡಗಳು ನಾಲ್ಕನೇ ಬಾರಿ ಐಪಿಎಲ್‌ ಮುಕುಟ ಧರಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.
ಉಭಯ ತಂಡಗಳು ಇಲ್ಲಿಯ ವರೆಗೆ ಮೂರು ಬಾರಿ ಐಪಿಎಲ್‌ ಪ್ರಶಸ್ತಿ ಬಾಚಿಕೊಂಡಿವೆ. ಕಳೆದ ಸೋಮವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನೇ ಮಣಿಸಿರುವ ಮುಂಬೈ ನೇರವಾಗಿ ಫೈನಲ್’ ಪ್ರವೇಶಿಸಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿರುವ ಚೆನ್ನೈ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಉಭಯ ತಂಡಗಳ ಬಲಾಬಲ, ಸಂಭವನೀಯ ತಂಡಗಳು, ಪ್ರಶಸ್ತಿಯ ನಿರೀಕ್ಷಿತ ಮೊತ್ತ, ರನ್ನರ್‌ ಆಪ್‌ಗೆ ಸಿಗುವ ಮೊತ್ತ ಇತ್ಯಾದಿ ಕುತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.