ದಾವಣಗೆರೆ, ಮೇ 12, 2019 (www.justkannada.in): ದಾವಣಗೆರೆ ನಗರದಲ್ಲಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಬುಳ್ ನಾಗ ಅಲಿಯಾಸ್ ನಾಗರಾಜ್ (30) ಹತ್ಯೆಯಾದ ರೌಡಿ ಶೀಟರ್. ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ಡಿಪೋ ಸಮೀಪ ಶನಿವಾರ ರಾತ್ರಿ ಈ ಹತ್ಯೆ ನಡೆದಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 9, 2017ರಂದು ಹಾವೇರಿಯ ರಾಣೆಬೆನ್ನೂರಿನಲ್ಲಿ ಗ್ಯಾಂಗ್ವೊಂದು ಬುಳ್ ನಾಗನ ಮೇಲೆ ದಾಳಿ ಮಾಡಿತ್ತು. ಆದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಮೂರು ಬಾರಿ ನಾಗರಾಜ್ ಹತ್ಯೆ ಯತ್ನ ನಡೆದಿತ್ತು.
ಎಸ್ಪಿ ಆರ್.ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ರಾತ್ರಿ ತನ್ನ ಸಹಚರರ ಜೊತೆ ಬೈಕ್ನಲ್ಲಿ ಬುಳ್ ನಾಗ ಬುರುವಾಗ ದುಷ್ಕರ್ಮಿಗಳು ನಾಗನ ಮೇಲೆ ದಾಳಿ ಮಾಡಿದ್ದಾರೆ. ಮಚ್ಚಿನ ಏಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಬುಳ್ ನಾಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.