ನನ್ನ ಬಳಿ ಹಣ ಇದ್ದರೆ ಶೋಭಕ್ಕನ ಬ್ಯಾಗ್‌ನಲ್ಲಿ ಇಟ್ಟು ಕಳುಹಿಸುತ್ತೇನೆ: ಸಚಿವ ಡಿ.ಕೆ.ಶಿವಕುಮಾರ್

ಹುಬ್ಬಳ್ಳಿ , ಮೇ 12, 2019 (www.justkannada.in): ನನ್ನ ಬಳಿ ಹಣ ಇದ್ದರೆ ಶೋಭಕ್ಕನ ಬ್ಯಾಗ್‌ನಲ್ಲಿ ಇಟ್ಟು ಕಳುಹಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಚುನಾವಣಾ ಅಕ್ರಮ ಮಾಡುತ್ತಿದ್ದಾರೆ, ಗೋಣಿ ಚೀಲದಲ್ಲಿ ಹಣ ತಂದಿದ್ದಾರೆ. ಅವರ ಕಾರಿನ ಟೈರ್‌ನಲ್ಲಿ ಹಣವಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಸಚಿವ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್, ನನ್ನ ಕಾರಿನ ಟೈರ್‌ನಲ್ಲಿ ಹಣ ಇದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿ ದ್ದಾರೆ. ಹಾಗೊಂದು ವೇಳೆ ಇದ್ದರೆ ಅವರೇ ಬಂದು ನನ್ನ ಕಾರಿನಲ್ಲಿ ಕೂರಲಿ ಎಂದು ವ್ಯಂಗ್ಯವಾಡಿದರು.

ನಾನು ಗೋಣಿ ಚೀಲದಲ್ಲಿ ಹಣ ತಂದಿದ್ದೇನೆ ಎಂಬ ಅನುಮಾನವಿದ್ದರೆ ಅದನ್ನು ಶೋಭಾ ಕರಂದ್ಲಾಜೆ ಅವರ ಬ್ಯಾಗ್‌ನಲ್ಲಿ ಇಟ್ಟು ಕಳುಹಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ. ಮೈತ್ರಿ ಸರ್ಕಾರ ಬಂದಾಗಿಂದ ಬಿಜೆಪಿಗರು ಸರ್ಕಾರ ಬೀಳುತ್ತೆ, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಹೇಳುತ್ತಲಿದ್ದಾರೆ. ಬೇಡ ಎಂದವರಾರು ಎಂದೂ ತಿರುಗೇಟು ನೀಡಿದ್ದಾರೆ