ಐಪಿಎಲ್​ ಸಮರಕ್ಕೆ ಆರ್’ಸಿಬಿ ರೆಡಿ: ಹೊಸ ಜೆರ್ಸಿ ರಿಲೀಸ್

ಬೆಂಗಳೂರು, ಆಗಸ್ಟ್ 26, 2020 (www.justkannada.in): ಬೆಂಗಳೂರು ತಂಡದ ನೂತನ ಜೆರ್ಸಿ ಅನಾವರಣ ಮಾಡಲಾಗಿದೆ.

ಆರ್​​ಸಿಬಿ ತನ್ನ ಟ್ವಿಟ್ಟರ್​ನಲ್ಲಿ ಫೋಟೋ ಪ್ರಕಟಿಸಿದೆ. ಐಪಿಎಲ್​ ಸಮರಕ್ಕೆ ಸಿದ್ಧ ಎನ್ನುವ ಸಂದೇಶವನ್ನು ಆರ್​ಸಿಬಿ ಟ್ವಿಟ್ಟರ್​ನಲ್ಲಿ ಸಾರಿದೆ.  ಖ್ಯಾತ ಕ್ರೀಡಾ ಪರಿಕರಗಳ ಸಂಸ್ಥೆ ‘ಝೆವೆನ್’​ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿದೆ.

ಕಳೆದ 5 ವರ್ಷಗಳಿಂದ ಈ ಸಂಸ್ಥೆಯು ಆರ್​​​​ಸಿಬಿ ಜತೆಗೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕಳೆದ ಸಲಕ್ಕೆ ಹೋಲಿಸಿದರೆ ಜೆರ್ಸಿಯಲ್ಲಿ ಈ ಸಲ ಸಣ್ಣ ಪುಟ್ಟ ಬದಲಾವಣೆಗಳಿವೆ. ಕೆಂಪು ಮತ್ತು ಕಪ್ಪು ಬಣ್ಣಗಳಿಂದ ವಿಶೇಷವಾಗಿ ಜೆರ್ಸಿ ವಿನ್ಯಾಸ ಮಾಡಲಾಗಿದೆ.