Monday, September 14, 2026

BDA Apartments

Home Front Page ಕಾಂಗ್ರೆಸ್ ಪಕ್ಷಕ್ಕೆ ಸೇರಲು ನನಗೆ ಆಹ್ವಾನ ಬಂದಿದೆ- ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್.

ಕಾಂಗ್ರೆಸ್ ಪಕ್ಷಕ್ಕೆ ಸೇರಲು ನನಗೆ ಆಹ್ವಾನ ಬಂದಿದೆ- ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್.

ಬೆಂಗಳೂರು,ಸೆಪ್ಟಂಬರ್, 6,2023(www.justkannada.in): ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಇಂದು ಅವರ ನಿವಾಸಕ್ಕೆ ಭೇಟಿ ನೀಡಿದರು.

ಕೆ. ಆರ್. ಪುರಂನ ದೇವಸಂದ್ರನಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ನಿವಾಸದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಹಿನ್ನಲೆ, ಡಿಸಿಎಂ ಶಿವಕುಮಾರ್ ಭೇಟಿ ನೀಡಿದ್ದರು. ಪೂರ್ಣಿಮಾ ತಂದೆ ದಿವಂಗತ ಕೃಷ್ಣಪ್ಪ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.ಕಾಂಗ್ರೆಸ್ ಪಕ್ಷಕ್ಕೆ ಸೇರಲು ನನಗೆ ಆಹ್ವಾನ ಬಂದಿದೆ poornima-shrinivas poornima shrinivas

ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಪೂರ್ಣಿಮಾ ಶ್ರೀನಿವಾಸ್,  ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನನಗೆ ಆಹ್ವಾನ ಇದೆ. ಆದರೆ ಭಾರತೀ ಜನತಾ ಪಾರ್ಟಿ ಬಿಡುವ ಯೋಚನೆ ಮಾಡಿಲ್ಲ. ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಈ ಬಗ್ಗೆ ಚರ್ಚೆ ಇತ್ತು. ಆದರೆ ಪಕ್ಷ ತೊರೆಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಎಲ್ಲರಿಗೂ ಹೇಳಿಯೇ ಹೋಗ್ತೇನೆ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ ಸ್ಪಷ್ಟನೆ ನೀಡಿದರು.

Key words: invite – join – Congress –  Former BJP MLA- Purnima Srinivas- DCM-DK shivakumar