ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು: ಈ ಕಾರಣಕ್ಕೆ ಉದಯನಿಧಿ ಸ್ಟಾಲಿನ್​​ ಲಕ್ಕಿ- ಮಾಜಿ ಸಚಿವ ಸಿ.ಟಿ ರವಿ.

ಬೆಂಗಳೂರು,ಸೆಪ್ಟಂಬರ್,6,2023(www.justkannada.in): ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿದ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿ.ಟಿ ರವಿ,  ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆ, ಟೀಕೆಗೆ ಅವಕಾಶ ಇದೆ. ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು. ಈ ಕಾರಣಕ್ಕೆ ಸಚಿವ ಉದಯನಿಧಿ ಸ್ಟಾಲಿನ್​​ ಲಕ್ಕಿ. ಒಂದು ವೇಳೆ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು. ಆದರೂ ಯಾರೋ ತಲೆಗೆ ಬೆಲೆ ಕಟ್ಟಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಬೇಗ ಯಾರೂ ತಲೆ ತೆಗೆಯುವುದಿಲ್ಲ ಎಂದು ಹೇಳಿದರು.

ಭಾರತ ಎನ್ನುವುದು ಅಸ್ತಿತ್ವ, ಆತ್ಮ. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂತು. ವಿಷ್ಣು ಪುರಾಣದಲ್ಲಿ ಭಾರತ ಎಂಬುದರ ಬಗ್ಗೆ ಚರ್ಚೆಯಾಗಿದೆ. ಮಹಾತ್ಮ ಗಾಂಧಿಯವರ ಜೀವನ ಚರಿತ್ರೆಯಲ್ಲೂ ಭಾರತ ಇದೆ. ಹೋರಾಟ ಮಾಡುವವರಿಗೆ ಮಂತ್ರವಾಗಿದ್ದೇ ಭಾರತ ಮಾತಾ ಕೀ ಜೈ. ಇಂಡಿಯಾ ಅನ್ನೋದು ವ್ಯವಹಾರಿಕ ದೃಷ್ಟಿಯಿಂದ ಬಂದಿದೆ ಅಷ್ಟೇ. ಪರಕೀಯರ ಆಕ್ರಮಣವಾದಾಗ ಇಂಡಿಯಾ ಆಗಿದೆ ಅಷ್ಟೇ. ದೇಶದ ಯಾವ ಸಾಹಿತ್ಯದಲ್ಲೂ ಇಂಡಿಯಾ ಅನ್ನೋ ಹೆಸರಿಲ್ಲ. ಕಾಂಗ್ರೆಸ್ಸಿಗರು ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ ಬಂದಿದ್ದಾರೆ ಎಂದು ಸಿ.ಟಿ ರವಿ ಕಿಡಿಕಾರಿದರು.

Key words: sanatana- religion-Udayanidhi Stalin -Lucky- Former Minister -CT Ravi.