ಸಿಎಂ ಸಿದ್ಧರಾಮಯ್ಯರನ್ನ ಹೊಗಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್:  ಮಧುಗಿರಿ ಜಿಲ್ಲೆ ಮಾಡಲು ಮನವಿ.

ಮಧುಗಿರಿ,ಸೆಪ್ಟಂಬರ್,6,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳನ್ನ ಟೀಕಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ಧರಾಮಯ್ಯರನ್ನ ಹೊಗಳಿದರು.

ಮಧುಗಿರಿಯಲ್ಲಿ ಮಾತನಾಡಿದ ಸಚಿವ  ಡಾ ಜಿ ಪರಮೇಶ್ವರ್, ರಾಜ್ಯದಲ್ಲಿ 2023 ರಲ್ಲಿ‌ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿದ್ದೀರಿ. ಸಿಎಂ ಸಿದ್ಧರಾಮಯ್ಯ ಮೊದಲ ಸಂಪುಟದಲ್ಲಿ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ್ದಾರೆ. ನಾನು ಹೊಗಳಿಕೆಗೆ ಮಾತನಾಡುತ್ತಿಲ್ಲ. ಅನೇಕ ಜನ ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡಿದರು. ಪ್ರಧಾನಿ ಮೋದಿ ಸಹ ಟೀಕೆ ಟಿಪ್ಪಣಿ ಮಾಡಿದರು. ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗುತ್ತೆ ಅಂತಾ ಹೇಳಿದರು. ಆದರೆ‌ ಸಿದ್ದರಾಮಯ್ಯ ನವರ ಅನುಭವ ಮೊದಲ ಸಂಪುಟದಲ್ಲಿ ಯೋಜನೆ ಜಾರಿ ಮಾಡಿದರು. 38 ಸಾವಿರ ಕೋಟಿ ಹಣ ತಾಯಂದಿರ ಅಕೌಂಟಿಗೆ ಹೋಗ್ತಾ ಇದೆ. ವಿದ್ಯುತ್ ಅನ್ನು ಉಚಿತವಾಗಿ ನೀಡಿದ್ದಾರೆ.ಉಚಿತ ಬಸ್ ಪ್ರಯಾಣ ನೀಡಿದ್ದು ಕೋಟ್ಯಾಂತರ ತಾಯಂದಿರು ಓಡಾಡುತ್ತಿದ್ದಾರೆ.  ಕರ್ನಾಟಕ ಸರ್ಕಾರದಿಂದ ಅನೇಕ ಯೋಜನೆಗಳನ್ನ ತಂದು ಕೊಟ್ಟಿದ್ದಾರೆ. ನಾವು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಭರವಸೆ ಅನುಷ್ಟಾನ ಮಾಡುತ್ತಿದ್ದಾರೆ ಇದ್ದಾರೆ. ಐದು ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಮತ್ತೊಮ್ಮೆ ಮೊದಲನೇ ಸ್ಥಾನಕ್ಕೆ ತರುವ ಕೆಲಸವನ್ನ ಸಿಎಂ ಸಿದ್ಧರಾಮಯ್ಯ ಮಾಡುತ್ತಿದ್ದಾರೆ ಎಂದರು.

ಮಧುಗಿರಿ ಸಬ್ ಡಿವಿಜನ್ ಬರಪೀಡಿತ ಪ್ರದೇಶ. ಒಂದು ರೀತಿಯಲ್ಲಿ ಶಾಶ್ವತ ಬರಪೀಡಿತ ಪ್ರದೇಶ ಅಂದ್ರೆ ತಪ್ಪಾಗಲಾರದು.ಪಾವಗಡ, ಶಿರಾ, ಪಾವಗಡ ಕೊರಟಗೆರೆ ಕಡಲೇಕಾಯಿ ಸಹ ಈ ಭಾರಿ ಇಲ್ಲ. ಈ ನಾಲ್ಕು ತಾಲ್ಲೂಕುಗಳು ಶಾಶ್ವತ ಬರಪೀಡಿತ ಪ್ರದೇಶ ಆಗಿದ್ದಾವೆ. ಹಿಂದೆ ನಮ್ಮ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಅನುಷ್ಟಾನ ಮಾಡಿಕೊಟ್ಟಿದ್ದೀರಿ.ತಮ್ಮಲ್ಲಿ ಒಂದು ವಿನಂತಿ ಮಾಡಬೇಕು ಅಂತಾ ಇದ್ದೇನೆ.ನಾವು ನಾಲ್ಕು ಜನ ವಿನಂತಿ ಮಾಡಿಕೊಳ್ಳುತ್ತೇವೆ.  ಮಧುಗಿರಿ ಜಿಲ್ಲೆ ಮಾಡಬೇಕು ಅಂತಾ. ಮಧುಗಿರಿ ಜಿಲ್ಲೆ ಮಾಡಬೇಕು ಎಂದು ಪರಮೇಶ್ವರ್ ಮನವಿ ಮಾಡಿದರು.

ಮಧುಗಿರಿ ಏಕಶಿಲಾ ಬೆಟ್ಟ ಏಷ್ಯಾ ಖಂಡದಲ್ಲಿ ಏಕೈಕ ಬೆಟ್ಟ. ಹಿಂದೆ ಅನುಮತಿ ಕೊಟ್ಟಿದ್ದೀರಿ ರೋಪ್ ವೇ ಹಾಕಿಕೊಡಿ. ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಸ್ಥಳ ಅಂತಾ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಧರೆಯೊಳು ಎಲ್ಲೆ ಇರಲಿ ಮರೆಯಲಾರೆ ಮಧುಗಿರಿ ಎಂದು ಪರಮೇಶ್ವರ್ ಹೇಳಿದರು.

Key words: Home Minister -Dr. G. Parameshwar –praised- CM Siddaramaiah