ಆರ್.ಎಲ್ ಜಾಲಪ್ಪ ಮಗ ಹಾಗೂ ಸಂಬಂಧಿ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ಆಪ್ತನ ಮನೆ ಮೇಲೂ ಐಟಿ ರೇಡ್…

ಬೆಂಗಳೂರು,ಅ,10,2019(www..justkannada.in): ಕಾಂಗ್ರೆಸ್ ಮುಖಂಡ ಆರ್.ಎಲ್ ಜಾಲಪ್ಪ ಅವರ ಮಗ ಹಾಗೂ ಸಂಬಂಧಿ ಮತ್ತು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತನ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆಪ್ತರಾದ ಬೇಗೂರಿನ ರಂಗನಾಥ್ ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲ ಮಂಗಲ ತಾಲ್ಲೂಕಿನ ಬೇಗೂರಿನ ನಿವಾಸದ ಮೇಲೆ ದಾಳಿಯಾಗಿದೆ. ರಂಗನಾಥ್ ರಿಯಲ್ ಎಸ್ಟೇಟ್ ಉದ್ಯಮಿ ಗುತ್ತಿಗೆದಾರರಾಗಿದ್ದಾರೆ. ಡಾ.ಜಿ ಪರಮೇಶ್ವರ್ ಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತ ಕಾಂಗ್ರೆಸ್ ಮುಖಂಡ ಆರ್.ಎಲ್ ಜಾಲಪ್ಪ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿ ಬೆನ್ನಲ್ಲೆ ಜಾಲಪ್ಪ ಅವರ ಮಗ ರಾಜೇಂದ್ರ ಮತ್ತು ಸೋದರಳಿಯ ಜಿ,ಹೆಚ್ ನಾಗರಾಜು ಮನೆ ಮೇಲೂ ದಾಳಿ ನಡೆದಿದೆ.  ದೊಡ್ಡ ಬಳ್ಳಾಪುರದ  ಸೋಮೇಶ್ವರ ಬಡಾವಣೆಯಲ್ಲಿರುವ ಜಾಲಪ್ಪ ಅವರ ಮಗ ರಾಜೇಂದ್ರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಜಾಲಪ್ಪ ಅವರ ಸೋದರಳಿಯ ಹಾಗೂ ದೇವರಾಜ ಅರಸು ಮೆಡಿಕಲ್ ಕಾಲೇಜಿನ ಕಾರ್ಯದರ್ಶಿಯೂ ಆದ ಜಿಹೆಚ್ ನಾಗರಾಜು ಮನೆ ಮೇಲೂ ಐಟಿ ರೇಡ್ ನಡೆದಿದೆ.  ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿರುವ ನಿವಾಸದ ಮೇಲೆ ಐಟಿ ದಾಳಿಯಾಗಿದೆ.

Key words: RL Jalappa’s- son – relative – former DCM –Parameshwar-friend-IT-raid