ಐಟಿ ದಾಳಿ ವಿಚಾರ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ…?

ಬೆಂಗಳೂರು,ಅ,10,2019(www.justkannada.in):  ಐಟಿ ಇಲಾಖೆ ಅಧಿಕಾರಿಗಳು ಯಾಕೆ ದಾಳಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಗೊತ್ತಿಲ್ಲ. ಐಟಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತಮ್ಮ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಐಟಿ ದಾಳಿ ಮಾಡಲಿ ಸಂತೋಷ. ನಮ್ಮಲ್ಲಿ ತಪ್ಪುಗಳಿದ್ದರೇ ಐಟಿ ದಾಳಿ ಮಾಡಲಿ.  ನಾನು ಕೇವಲ ಶಿಕ್ಷಣ ಸಂಸ್ಥೆಗಳನ್ನ ಮಾತ್ರ ನಡೆಸುತ್ತಿದ್ದೇನೆ. ಯಾವುದೇ ವ್ಯವಹಾರ ಬ್ಯಸಿನೆಸ್ ಮಾಡುತ್ತಿಲ್ಲ. ದಾಳಿ ಬಗ್ಗೆ ಐಟಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದರು.

ಇನ್ನು ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯೂ ಅಲ್ಲ. ವಿಪಕ್ಷನಾಯಕರಾಗಿ ಸಿದ್ಧರಾಮಯ್ಯ ಸಮರ್ಥರಿದ್ದಾರೆ. ಹೆಚ್.ಕೆ ಪಾಟೀಲ್ ಪಾಟೀಲ್ ಹಿರಿಯರಿದ್ದಾರೆ. ಅನುಭವವುಳ್ಳವರು. ಹೀಗಾಗಿ ವಿಪಕ್ಷ ನಾಯಕ ಸ್ಥಾನ ಕೇಳಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ಇನ್ನು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಇಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: IT- attacks- Former DCM -Dr G Parameshwar -reaction