Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ಮೈಸೂರಿನ ಮಾನಸಗಂಗೋತ್ರಿಯ ಕೆಎಸ್ ಸಿಎ, ಎಸ್’ಜೆಸಿಇ ಕ್ರೀಡಾಂಗಣದಲ್ಲಿ ಅಂಧರ ಕ್ರಿಕೆಟ್ ಸಂಭ್ರಮ

ಮೈಸೂರಿನ ಮಾನಸಗಂಗೋತ್ರಿಯ ಕೆಎಸ್ ಸಿಎ, ಎಸ್’ಜೆಸಿಇ ಕ್ರೀಡಾಂಗಣದಲ್ಲಿ ಅಂಧರ ಕ್ರಿಕೆಟ್ ಸಂಭ್ರಮ

ಮೈಸೂರು, ನವೆಂಬರ್ 2, 2019 (www.justkannada.in): ಮಾನಸ ಗಂಗೋತ್ರಿ ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಂಧರ ಕ್ರಿಕೆಟ್ ಆರಂಭವಾಗಿದೆ.

ಕರ್ನಾಟಕ ತಂಡ ಇಲ್ಲಿ ಇಂಡಸ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ಟ್ವೆಂಟಿ-20 ಅಂಧರ ಕ್ರಿಕೆಟ್‌ ಟೂರ್ನಿಯ ಎರಡನೇ ಲೆಗ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ.

ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಎಂಟು ವಿಕೆಟ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಹರಿಯಾಣ ತಂಡ ದೀಪಕ್‌ ಮಲಿಕ್‌ ಅವರ ಶತಕದ (138, 65 ಎಸೆತ) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 213 ರನ್ ಗಳಿಸಿತು.

ಆತಿಥೇಯ ತಂಡ ಸುನಿಲ್ (98, 52 ಎಸೆತ) ಮತ್ತು ಲೋಕೇಶ್ (75, 58 ಎಸೆತ) ಅವರ ಭರ್ಜರಿ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ ಗೆಲುವಿನ ಗಡಿ ದಾಟಿತು. ಮತ್ತೊಂದು ಪಂದ್ಯದಲ್ಲಿ ದೆಹಲಿ ತಂಡ ಗೋವಾ ಎದುರು 134 ರನ್‌ಗಳ ಭರ್ಜರಿ ಜಯ ಸಾಧಿಸಿತು