ಹೆಸರಲ್ಲಿ ಬೆಂಗಳೂರು ‘ಕೈ ಬಿಟ್ಟ’ ರಾಯಲ್ ಚಾಲೆಂಜರ್ಸ್ ! ತಿರುಗಿಬಿದ್ದ ಅಭಿಮಾನಿಗಳು

kannada t-shirts

ಬೆಂಗಳೂರು, ನವೆಂಬರ್ 2, 2019 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ ನ ಆರ್ ಸಿಬಿ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಈ ಕುರಿತು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಭಿಯಾನ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಲ್ಲಿ ಬೆಂಗಳೂರನ್ನು ಕೈ ಬಿಡಲಾಗಿದೆ.

ಟ್ವಿಟ್ಟರ್ ಖಾತೆಯಲ್ಲಿ ಹೆಸರು ಬೆಂಗಳೂರು ಹೆಸರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಹ್ಯಾಷ್ ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರ ನಿರ್ದೇಶಕ ಸಿಂಪಲ್ ಸುನಿ ‘ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ ನಾವು ನಿಮ್ಮನ್ನು ಇಷ್ಟಪಡಲು ಕಾರಣ, ನಿಮ್ಮೊಳಗಿನ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ ‘ಬೆಂಗಳೂರು’. ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ’. ಎಂದು ಆಗ್ರಹಿಸಿದ್ದಾರೆ. ಹೀಗಾಗಿ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

website developers in mysore