ಇಂದ್ರಜಿತ್ ಕನ್ನಡ ಸಾಹಿತ್ಯದ ಹತ್ತು ಶ್ರೇಷ್ಠ ಸಾಹಿತಿಗಳ, ಪತ್ರಕರ್ತರ ಹೆಸರು ಹೇಳಲಿ ; ರವಿ ಬೆಳಗೆರೆ ಸವಾಲು

ಇಂದ್ರಜಿತ್ ಕನ್ನಡ ಸಾಹಿತ್ಯದ ಹತ್ತು ಶ್ರೇಷ್ಠ ಸಾಹಿತಿಗಳ, ಪತ್ರಕರ್ತರ ಹೆಸರು ಹೇಳಲಿ ; ರವಿ ಬೆಳಗೆರೆ ಸವಾಲು

ಬೆಂಗಳೂರು, ಆಗಸ್ಟ್,31, 2020  ; ಇಂದ್ರಜಿತ್ ಲಂಕೇಶ್ ಕನ್ನಡ ಸಾಹಿತ್ಯದ ಹತ್ತು ಶ್ರೇಷ್ಠ ಸಾಹಿತಿಗಳ ಹಾಗೂ ಪತ್ರಕರ್ತರ ಹೆಸರು ಹೇಳಲಿ ಎಂದು ಪತ್ರಕರ್ತ ರವಿ ಬೆಳಗೆರೆ ಸವಾಲು ಹಾಕಿದ್ದಾರೆ.

jk-logo-justkannada-logo

ಇಂದ್ರಜಿತ್ ಗೆ ಕೈ ನಲ್ಲಿ ಎರಡು ಸಿನಿಮಾ ಇಲ್ಲ. ಮೊದಲು ಮೇಘನಾ ಸರ್ಜಾ ಕ್ಷಮೆ ಕೇಳಲಿ. ಏನು ಗೊತ್ತಿಲ್ಲದೆ ಹಾಗೇ ಬಾಯಿ ಬಡಿದುಕೊಳ್ಳಬಾರದು. ಹೇಳಿಕೆ ನೀಡುವುದಕ್ಕು ಒಂದು ತೂಕ ಬೇಕು. ಅದು ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಬಳಿಕ ಶಿವಣ್ಣ ಅವರಿಗೆ ಮಾತ್ರ ಇರೋದು. ಇಂದ್ರಜಿತ್ ಮಾತಿಗೆ ಆ ತೂಕ ಇಲ್ಲ ಎಂದು ಕಿಡಿಕಾರಿದ್ದಾರೆ.

Indrajit-names-ten-greatest-literary-figures-Kannada-literature-journalists-Ravi Belagere-Challenge

90 ಪುಸ್ತಕ ಬರೆದಿದ್ದು, ಗೌರಿ ಹತ್ಯೆ ಕರಿತು ಪುಸ್ತಕ ಬರೆಯುತ್ತಿದ್ದೇನೆ. ಗೌರಿ ಹತ್ಯೆ ಕುರಿತಂತೆ ಚಾರ್ಚ್ ಶೀಟ್ ಓದಿದ್ದಾನ ಕೇಳಿ. ನನ್ನ ಅಕ್ಕನನ್ನ ನಕ್ಸಲೆಟ್ ಕೊಂದರು ಎಂದು ಹೇಳಿಕೆ ನೀಡಿದ. ಆತನಿಗೆ ಮಾತನಾಡೋಕೆ ಬರಲ್ಲ. ಬರೆಯೋಕೆ ಸಾಧ್ಯವಿಲ್ಲ . ಒಂದು ತಾಸಿಗೆ ಒಂದು ಪುಟ ಬರೆಯಲಿ ಎಂದು ಲೇವಡಿ ಮಾಡಿದ್ದಾರೆ.

ಲಂಕೇಶ್ ಅವರನ್ನು ನಾನು ಗೌರವಿಸುತ್ತೇನೆ

ಇಂದ್ರಜಿತ್ ಅಕ್ಕ,ತಂಗಿ,ತಾಯಿ ಎಲ್ಲರ ದೂರ ಮಾಡಿಕೊಂಡಿದ್ದಾನೆ. ಲಂಕೇಶ್ ನಾನು ಜಗಳ ಮಾಡಿದ್ದೇವೆ. ಆದರೆ, ಅವರನ್ನು ಗೌರವಿಸುತ್ತೇನೆ.  ಅವರ ಸಾಹಿತ್ಯ ಇವತ್ತು ಓದುತ್ತೇನೆ., ಅವ್ವ ಪಂದ್ಯವನ್ನು ಪೇಪರ್ ಇಲ್ಲದೇ ಓದೋಕೆ ಇಂದ್ರಜಿತ್ ಗೆ ಓದಲು ಹೇಳಿ ನೋಡೋಣ. ಗೌರಿ ಬರೆದಿರುವುದಾದರೂ ಓದಿದ್ದಾನ ಕೇಳಿ. ಪತ್ರಕರ್ತನಾಗಿ, ಬರಹಗಾರನಾಗಿ ನಾನು ಪ್ರಶಸ್ತಿ ಪಡೆದುಕೊಂಡಿದ್ದೇನೆ ನನ್ನ ಬಗ್ಗೆ ಈತ ಮಾತನಾಡುತ್ತಾನೆ. ಯಾರು ಇಂದ್ರಜಿತ್ ಲಂಕೇಶ್ ಅಂದರೆ, ಏನು ತನಿಖೆ ಮಾಡಿದ್ದೀಯ ನೀನು ಎಂದು ಪ್ರಶ್ನಿಸಿದ್ದಾರೆ.

key words ; Indrajit-names-ten-greatest-literary-figures-Kannada-literature-journalists-Ravi Belagere-Challenge