Saturday, October 10, 2026

BDA Apartments

Home Front Page ಸದನದಲ್ಲಿ ಸದ್ದು ಮಾಡಿದ ಅದಾನಿ-ಸಿಎಂ ಡಿಕೆಶಿ ಭೇಟಿ ವಿಚಾರ: ಆರ್.ಅಶೋಕ್ ವ್ಯಂಗ್ಯ

ಸದನದಲ್ಲಿ ಸದ್ದು ಮಾಡಿದ ಅದಾನಿ-ಸಿಎಂ ಡಿಕೆಶಿ ಭೇಟಿ ವಿಚಾರ: ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು,ಆಗಸ್ಟ್,24,2026 (www.justkannada.in):  ಉದ್ಯಮಿ ಗೌತಮ್ ಅದಾನಿ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿರುವ ವಿಚಾರ ಸದನದಲ್ಲೂ ಸದ್ದು ಮಾಡಿದ್ದು  ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಆರ್.ಅಶೋಕ್, ಗೌತಮ್ ಅದಾನಿ ಅವರನ್ನು ಬಿಜೆಪಿ ಏಜೆಂಟ್ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಾರೆ, ಮತ್ತೊಂದು ಕಡೆಯಲ್ಲಿ ರೆಡ್ ಕಾರ್ಪೆಟ್ ಹಾಕಿ ಅವರನ್ನು ಸ್ವಾಗತಿಸುತ್ತಾರೆ ಎಂದು ಕಿಡಿಕಾರಿದರು.

ಗೌತಮ್ ಅದಾನಿ ಅವರನ್ನ ಬಿಜೆಪಿ ಏಜೆಂಟ್ ಅಂತಿದ್ದರು. ಈಗ ಅವರನ್ನೇ ಕರೆಸಿದರು.  ಉದ್ಯಮಿ ಗೌತಮ್   ಅದಾನ ಡಿಕೆ ಶಿವಕುಮಾರ್ ಮನೆಗೆ ಯಾಕೆ ಬಂದರು.  ಎಲ್ಲಾ ಪಾರ್ಕ್ ಗಳಲ್ಲಿ  5 ಪರ್ಸೆಂಟ್ ಜಾಗವನ್ನ ತೆಗೆದುಕೊಂಡು ಅದನ್ನು ರಿಯಲ್ ಎಸ್ಟೇಟ್ ಗೆ ಕೊಡುವ ಹುನ್ನಾರ ಮಾಡುತ್ತಿದ್ದಾರೆ. ಅದಾನಿ ಜತೆ ಸಿಎಂ ಡಿಕೆಶಿ ಶಾಮೀಲಾಗಿದ್ದಾರೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.ಸದನದಲ್ಲಿ ಸದ್ದು ಮಾಡಿದ ಅದಾನಿ jk02_new jk02 new

Key words: Adani-CM DK Shivakumar, Meet,  R. Ashok