Sunday, October 11, 2026

Dasara Wishes

Happy Dasara
Home Front Page ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ, ಆಗಸ್ಟ್, 24,2026 (www.justkannada.in):  ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು  ಸುಪ್ರೀಂಕೋರ್ಟ್‌ ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದೆ.

ತಮಿಳುನಾಡು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ  ಸದ್ಯ, ಅಂಕಿಅಂಶಗಳೊಂದಿಗೆ ಬರುವಂತೆ ಉಭಯ ರಾಜ್ಯಗಳಿಗೆ ಸೂಚಿಸಿ, ಮುಂದಿನ ಸೋಮವಾರಕ್ಕೆ (ಆಗಸ್ಟ್ 31) ವಿಚಾರಣೆ ಮುಂದೂಡಿತು.ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ...

ತಮಿಳುನಾಡು ಪರ ವಾದ ಮಂಡಿಸಿದ  ಹಿರಿಯ ವಕೀಲ ಸಿಎಸ್ ವೈದ್ಯನಾಥನ್, ರಾಜ್ಯಕ್ಕೆ ಬರಬೇಕಾದ ಪ್ರಮಾಣದ ಕಾವೇರಿ ನೀರು ಸಿಗುತ್ತಿಲ್ಲ. ಕರ್ನಾಟಕ ನಮಗೆ ನೀರು ಹರಿಸುತ್ತಿಲ್ಲ ಪ್ರಾಧಿಕಾರದ ಸ್ಥಾಪನೆಯ ಅಧಿಕಾರಗಳು ಕಾರ್ಯಗಳು ಮತ್ತು ಕರ್ತವ್ಯಗಳನ್ನ ದಯವಿಟ್ಟು ನೋಡಿ ಈ ಆದೇಶಗಳನ್ನ ಕರ್ನಾಟಕ ರಾಜ್ಯ ಪಾಲಿಸುತ್ತಿಲ್ಲ ಅಲ್ಪಪ್ರಮಾಣದ ನೀರು ಹರಿಸುತ್ತಿದೆ ಕರ್ನಾಟಕ ತನ್ನ ರೈತರ ಬೆಳಗೆಳಿಗೆ ಕಾವೇರಿ ನೀರು ಹರಿಸುತ್ತಿದೆ ಆದರೆ ತಮಿಳುನಾಡಿಗೆ ನೀರು ಇಲ್ಲ ಎನ್ನುತ್ತಿದೆ  ಎಂದರು.

ಈ ನಡುವೆ ನಾವು ನೀರು ಹರಿಸುತ್ತಿದ್ದೇವೆ ಎಂದು ಕರ್ನಾಟಕ ಪರ ವಾದ ಮಂಡಿಸಲಾಯಿತು. ನಂತರ ಈಗ ಸಮಸ್ಯೆ ಏನಿದೆ ಎಂದ ನ್ಯಾಯಪೀಠ ಮುಂದಿನ  ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು.ಕಾವೇರಿ ನೀರು ವಿವಾದ jk02_new jk02 new

Key words: Cauvery water dispute, Supreme Court, adjourned, hearing