ನವದೆಹಲಿ,ಅಕ್ಟೋಬರ್,13,2026 (www.justkannada.in): 2026-27ರಲ್ಲಿ ಭಾರತದ ಜಿಡಿಪಿ ದರ ಶೇ7ರಷ್ಟಿದೆ. ಭಾರತ ಸಾಕಷ್ಟು ಬದಲಾವಣೆ ಆಗುತ್ತಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ದೆಹಲಿಯ ನ್ಯೂ ಎಕಾನಮಿ ಪೋರಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತ ಎಷ್ಟು ಶಸಕ್ತೀಕರಣಗೊಳ್ಳುತ್ತದೆಯೋ ಅದರಿಂದ ಜಾಗತಿಕವಾಗಿ ಹೆಚ್ಚು ಉಪಯೋಗವಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲಾಗಿದೆ ಡೆಟಾ ಸೆಂಟರ್ ಕ್ಷೇತ್ರದಲ್ಲೂ ಭಾರತ ದಾಪುಗಾಲು ಇಟ್ಟಿದೆ ಎಂದರು.
೨೫ ಕೋಟಿ ಜನರನ್ನ ಬಡತನದಿಂದ ಹೊರತರಲಾಗಿದೆ ಪಿಎಂ ಸೂರ್ಯಘರ್ ಪಿಎಂ ಕುಸುಮ್ ಯೋಜನೆ ಮೂಲಕ ವಿದ್ಯುತ್ ಸ್ವಾಲಂಬನೆ ಸಾಧಸಿದ್ದೇವೆ. ೨೧ ಶತಮಾನ ಅದ್ಮುತ ಅವಕಾಶಗಳನ್ನ ತಂದಿದೆ ಜಗತ್ತುಒಂದು ಸಮಸ್ಯೆಯಿಂದ ಆಚೆ ಬರುತ್ತಿದ್ದಂತೆ ಮತ್ತೊಂದು ಸಮಸ್ಯೆ ಬರುತ್ತಿದೆ ಎಂದರು.
india’s, GDP, growth rate , stands , 7%, PM Modi







