Tuesday, October 13, 2026

Dasara Wishes

Happy Dasara
Home Front Page SC, ST ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು ವಿಚಾರ: ಮೇಲ್ಮನವಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ-...

SC, ST ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು ವಿಚಾರ: ಮೇಲ್ಮನವಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ- ಡಿಸಿಎಂ ಪರಮೇಶ್ವರ್‌

ಬೆಂಗಳೂರು,ಅಕ್ಟೋಬರ್‌,13,2026(www.justkannada.in)  ಎಸ್‌ ಸಿ, ಎಸ್‌ ಟಿ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡಿದ್ದ ಆದೇಶವನ್ನ ಹೈಕೋರ್ಟ್‌ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಬೇಕೋ ಬೇಡವೋ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಡಿಸಿಎಂ ಪರಮೇಶ್ವರ್‌ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್‌, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ತೀರ್ಮಾನ ಮಾಡಲಾಗಿತ್ತು.   ಅದನ್ನ ಪರಿಗಣಿಸದೇ ಹೈಕೋರ್ಟ್‌ ರಿಜೆಕ್ಟ್ ಮಾಡಿದೆ.  ಈ ವಿಚಾರದ ಬಗ್ಗೆ ಮತ್ತೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅವಕಾಶ ವಂಚಿತರಿಗೆ ಅನುಕೂಲ ಆಗಲು ಮೀಸಲಾತಿ ತರಲಾಗಿತ್ತು. ಇದೆಲ್ಲವನ್ನೂ ಗಮನಿಸಿ ನ್ಯಾಯಾಲಯವು ಆದೇಶ ನೀಡಬೇಕು.‌  ಮೇಲ್ಮನವಿ ಸಲ್ಲಿಸಬೇಕಾ ಬೇಡವಾ ಅಂತಾ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.Quashing parameshwar

ಸ್ಟಿಂಗ್‌ ಆಪರೇಷನ್‌ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ.   ಗೃಹ ಸಚಿವನಾಗಿದ್ದಾಗ ಸ್ವಲ್ಪ ಮಾಹಿತಿ ಬರ್ತಿತ್ತು. ಈಗ ನೀವು ಹೇಳಿದಾಗ ತಿಳಿದುಕೊಳ್ಳಬೇಕು ಅಷ್ಟೆ ಎಂದರು.Quashing jk02_new jk02 new

Quashing, hike , SC/ST reservation, quotas, High court, DCM,  Parameshwara.

English Summary
Title

arnataka High Court Quashes SC/ST Reservation Hike Beyond 50% Ceiling

Short Description
The Karnataka High Court has quashed the state’s 2022 law that hiked reservation quotas for Scheduled Castes (SCs) and Scheduled Tribes (STs). Chief Justice Vibhu Bakhru and Justice K.S. Hemalekha ruled that raising SC quotas to 17% and ST quotas to 7% violated the 50% constitutional ceiling set by the Supreme Court. The ruling pushed total reservations to 56%, breaching equality laws. Reacting to the verdict, DCM G. Parameshwara called it a major blow to social justice. He urged the Union government to review the 50% cap and include the policy in the Ninth Schedule to shield it from judicial review, confirming the state will appeal.
Keywords
Quashing, hike, SC/ST reservation, quotas, High court, DCM, Parameshwara.